ರಾಷ್ಟ್ರೀಯ

ಇನ್ನು ಮುಂದೆ ಅಂಕಪಟ್ಟಿ. ಪದವಿ ಪ್ರಮಾಣ ಪತ್ರಗಳು ಡಿಜಿಟಲ್ ರೂಪದಲ್ಲಿ ಮಾರ್ಪಟ್ಟು.

Pinterest LinkedIn Tumblr

digital_repot_cardreport-ca

ನವದೆಹಲಿ: ಮುಂದಿನ ಶೈಕ್ಷಣಿಕ (2017ರಿಂದ) ವರ್ಷದಿಂದ ಪದವಿ ಸೇರಿದಂತೆ ಶಿಕ್ಷಣಕ್ಕೆ ಸಂಬಂಧಿಸಿದ ಎಲ್ಲ ಪ್ರಮಾಣಪತ್ರಗಳನ್ನು ವಿದ್ಯಾರ್ಥಿಗಳು ಡಿಜಿಟಲ್ ರೂಪದಲ್ಲಿ ಪಡೆಯಲಿದ್ದಾರೆ. ಈ ನಿಟ್ಟಿನಲ್ಲಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ (ಎಚ್‌ಆರ್ಡಿ) ಸಚಿವಾಲಯವು ಕಾರ್ಯೋನ್ಮುಖವಾಗಿದೆ.

‘2017ರ ನಂತರ ಪರೀಕ್ಷಾ ಮಂಡಳಿಗಳ ಪ್ರಮಾಣ ಪತ್ರ, ಪದವಿ ಪ್ರಮಾಣಗಳನ್ನು ಡಿಜಿಟಲ್ ಮಾದರಿಯಲ್ಲೇ ನೀಡುತ್ತೇವೆ ಎಂಬ ಪ್ರತಿಜ್ಞೆ ಮಾಡುವ ಅಗತ್ಯವಿದೆ’ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

ರಾಷ್ಟ್ರೀಯ ಶೈಕ್ಷಣಿಕ ದಾಖಲೆಗಳ ಕೇಂದ್ರದ ಕುರಿತು ಜಾಗೃತಿ ಮೂಡಿಸುವುದಕ್ಕಾಗಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಸಮಾವೇಶದಲ್ಲಿ ಅವರು ಮಾತನಾಡಿದರು. ‘ಪ್ರಧಾನಿ ನರೇಂದ್ರ ಮೋದಿ ಅವರು ಡಿಜಿಟಲ್ ಇಂಡಿಯಾ ಅಭಿಯಾನಕ್ಕೆ ಈಗಾಗಲೇ ಚಾಲನೆ ನೀಡಿದ್ದು, ಇಡೀ ವ್ಯವಸ್ಥೆಯನ್ನು ಡಿಜಿಟಲೀಕರಣ ಮಾಡಲು ಬಯಸಿದ್ದಾರೆ’ ಎಂದು ಹೇಳಿದ್ದಾರೆ.

ವಿದ್ಯಾರ್ಥಿಗಳಿಗೂ ಅವಕಾಶ: ಪ್ರಮಾಣಪತ್ರಗಳನ್ನು ಡಿಜಿಟಲ್ ರೂಪದಲ್ಲಿ ನೀಡುವುದು ಮಾತ್ರವಲ್ಲದೇ, ಪ್ರತೀ ವಿದ್ಯಾರ್ಥಿಗೂ ತಾನು ಪಡೆದಿರುವ ಇತರೆ ಪ್ರಮಾಣ ಪತ್ರಗಳು ಮತ್ತು ಪ್ರಶಸ್ತಿಗಳನ್ನು ಅಪ್ಲೋಡ್ ಮಾಡಲು ಇದರಲ್ಲಿ ಅವಕಾಶವಿದೆ ಎಂದು ಅವರು ತಿಳಿಸಿದ್ದಾರೆ.

ನಕಲಿ ಪ್ರಮಾಣ ಪತ್ರ ತಡೆಯಲು ಕ್ರಮ :
ನಕಲಿ ಶೈಕ್ಷಣಿಕ ಪದವಿ ಮತ್ತು ಅಂಕಪಟ್ಟಿಗಳ ಹಾವಳಿಯನ್ನು ತಪ್ಪಿಸುವುದಕ್ಕಾಗಿ ಎಲ್ಲಾ ದಾಖಲೆಗಳು ಡಿಜಿಟಲ್ ರೂಪದಲ್ಲಿ ಲಭ್ಯವಿರುವಂತೆ ಮಾಡಲು ಡಾಟಾಬೇಸ್ ವ್ಯವಸ್ಥೆಯನ್ನು ಸ್ಥಾಪಿಸುವುದು ಕೇಂದ್ರದ ಉದ್ದೇಶ.

ಒಬ್ಬ ವಿದ್ಯಾರ್ಥಿಯ ಅಂಕ ಪಟ್ಟಿ, ಪ್ರಮಾಣಪತ್ರಗಳು ಡಿಜಿಟಲ್ ರೂಪದಲ್ಲಿ ಸುಲಭವಾಗಿ ಲಭ್ಯವಿರುವುದರಿಂದ, ಉದ್ಯೋಗ ನೀಡುವ ಕಂಪೆನಿಗಳಿಗೆ ಹೆಚ್ಚು ಪ್ರಯೋಜನವಾಗಲಿದೆ. ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಿವರಗಳನ್ನು ಅವುಗಳು ಸುಲಭವಾಗಿ ಪಡೆಯಬಹುದು.

Comments are closed.