ಕರ್ನಾಟಕ

ಜಂತರ್-ಮಂತರ್‍ನಲ್ಲೂ ಕಾವೇರಿ ಪ್ರತಿಭಟನೆ

Pinterest LinkedIn Tumblr

saveದೆಹಲಿ, ಸೆ.9-ತಮಿಳುನಾಡಿಗೆ ಇಂದು ಕಾವೇರಿ ನೀರು ಹರಿಸುವಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಖಂಡಿಸಿ ದೆಹಲಿಯಲ್ಲಿಯೂ ಕನ್ನಡಿಗರು ಪ್ರತಿಭಟನೆ ನಡೆಸಿದ್ದಾರೆ. ಜಧಾನಿಯ ಐತಿಹಾಸಿಕ ಸ್ಮಾರಕವಾದ ಜಂತರ್ ಮಂತರ್ ಮುಂದೆ ಸೇರಿದ್ದ ಕನ್ನಡಿಗರು ನ್ಯಾಯಾಧೀಶರ ಪೋಷಾಕಿನಲ್ಲಿ ಅಣುಕು ಪ್ರದರ್ಶನ ನಡೆಸಿ ರಾಜ್ಯಕ್ಕೆ ಆಗಿರುವ ಅನ್ಯಾಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಕರ್ನಾಟಕದಲ್ಲಿನ ಜಲಾಶಯಗಳು ಬತ್ತಿ ಹೋಗಿವೆ. ಮಳೆ ಅಭಾವದಿಂದ ರೈತರು ಕಂಗಾಲಾಗಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಗಾಯದ ಮೇಲೆ ಬರೆ ಎಳೆದಂತೆ ತಮಿಳುನಾಡಿಗೆ ನೀರು ಹರಿಸುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದೆ ಎಂದು ಪ್ರತಿಭಟನಾಕಾರರು ಬೇಸರ ವ್ಯಕ್ತಪಡಿಸಿದರು. ಇಂದು ಕರೆ ನೀಡಿರುವ ಕರ್ನಾಟಕ ಬಂದ್‍ಗೆ ಬೆಂಬಲ ವ್ಯಕ್ತಪಡಿಸಿ ದೆಹಲಿಯಲ್ಲಿರುವ ಕನ್ನಡಿಗರು ಪ್ರತಿಭಟನೆ ನಡೆಸಿ ಗಮನಸೆಳೆದರು.

Comments are closed.