ಮನೋರಂಜನೆ

ಕಾವೇರಿ ಹೋರಾಟದಲ್ಲಿ ಭಾಗಿಯಾಗಲು ಮುಂದಾದ ಕನ್ನಡ ಚಿತ್ರರಂಗ; ಕರ್ನಾಟಕ ಬಂದ್‌ ಗೆ ಬೆಂಬಲ

Pinterest LinkedIn Tumblr

strike

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಸುಪ್ರೀಂಕೋರ್ಟ್‌ ನೀಡಿರುವ ಆದೇಶ ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟದಲ್ಲಿ ಭಾಗಿಯಾಗಲು ಕನ್ನಡ ಚಿತ್ರರಂಗ ಮುಂದಾಗಿದೆ.

ಶುಕ್ರವಾರ ನಡೆಯಲಿರುವ ಕರ್ನಾಟಕ ಬಂದ್‌ಗೆ ಚಿತ್ರರಂಗ ಬೆಂಬಲ ಸೂಚಿಸಿದೆ. ಕನ್ನಡ ಚಿತ್ರರಂಗದ ಪ್ರಮುಖ ನಟ, ನಟಿಯರು, ಕಲಾವಿದರು, ತಂತ್ರಜ್ಞರು ಶುಕ್ರವಾರ ಮಂಡ್ಯಕ್ಕೆ ತೆರಳಿ ಕಾವೇರಿ ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ.

ನಟ ದರ್ಶನ್‌ ಮತ್ತು ನಟ, ನಿರ್ದೇಶಕ ಪ್ರೇಮ್‌ ರೈತರ ಹೋರಾಟದಲ್ಲಿ ಪಾಲ್ಗೊಳ್ಳುವುದಾಗಿ ಘೋಷಿಸಿದ್ದಾರೆ. ಕರ್ನಾಟಕ ಬಂದ್‌ಗೆ ಚಿತ್ರರಂಗ ಬೆಂಬಲ ನೀಡಿರುವುದರಿಂದ ಶುಕ್ರವಾರ ಚಿತ್ರಮಂದಿರಗಳು ಮುಚ್ಚಿರಲಿವೆ.

Comments are closed.