ರಾಷ್ಟ್ರೀಯ

ಉಪವಾಸ ಸತ್ಯಾಗ್ರಹ ಸಹಾಯ ಮಾಡಲಿಲ್ಲ: ಇರೋಮ್ ಶರ್ಮಿಳಾ

Pinterest LinkedIn Tumblr

Irom-Sharmilaಇಂಫಾಲ: ಉಪವಾಸ ಸತ್ಯಾಗ್ರಹ ನನಗೆ ಸಹಾಯ ಮಾಡಲಿಲ್ಲ, ಕಾನೂನು ವಿರುದ್ಧ ನನ್ನ ಕಾರ್ಯತಂತ್ರವನ್ನಷ್ಟೇ ಬದಲಾಯಿಸಿಕೊಂಡಿದ್ದೇನೆಂದು ಮಾನವ ಹಕ್ಕುಗಳ ಹೋರಾಟಗಾರ್ತಿ ಇರೋಮ್ ಶರ್ಮಿಳಾ ಅವರು ಹೇಳಿದ್ದಾರೆ.
ಇಂಫಾಲದಲ್ಲಿ ಇಂದು ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಬಳಿ ಹಾಜರಾದ ಬಳಿಕ ನ್ಯಾಯಾಲಯದ ಹೊರಾಂಗಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಉಪವಾಸ ಸತ್ಯಾಗ್ರಹ ಸಹಾಯ ಮಾಡುವುದಿಲ್ಲ ಎಂಬ ಪಾಠವನ್ನು ಕಲಿತಿದ್ದೇನೆ. ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ನನಗೆ ಬೆಂಬಲಿಗರಿದ್ದಾರೆ. ನನ್ನ ಹೋರಾಟವನ್ನು ಮುಂದುವರೆಸಲು ನಾನು ನಿರ್ಧರಿಸಿದ್ದೇನೆ. ನನ್ನ ಹೋರಾಟವನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಹೋರಾಟದ ಕಾರ್ಯತಂತ್ರವನ್ನಷ್ಟೇ ಬದಲಾಯಿಸಿದ್ದೇನೆ ಎಂದು ಹೇಳಿದ್ದಾರೆ.
ಈಶಾನ್ಯ ರಾಜ್ಯಗಳು ಮತ್ತು ಕಾಶ್ಮೀರದಲ್ಲಿ ಸೇನಾ ಯೋಧರು ನಡೆಸುತ್ತಿದ್ದ ದಬ್ಬಾಳಿಕೆ ಮತ್ತು ದೌರ್ಜನ್ಯವನ್ನು ಖಂಡಿಸಿ ಇರೋಮ್‌ ಶರ್ಮಿಳಾ ಅವರು 2000ನೇ ವರ್ಷದಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು. ಆದರೆ ಸರ್ಕಾರ ಯಾವುದೇ ಧನಾತ್ಮಕ ಪ್ರತಿಕ್ರಿಯೆ ನೀಡದ ಕಾರಣ ಆಗಸ್ಟ್ 9 ರಂದು ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದ್ದರು.

Comments are closed.