ಲಕ್ನೋ, ಅ.23: ಪುಟ್ಟ ಪೋರಿಯೊಬ್ಬಳು ನಾಲ್ಕನೇ ವಯಸ್ಸಿನಲ್ಲೇ 9 ತರಗತಿಗೆ ಪ್ರವೇಶ ಪಡೆಯುವ ಮೂಲಕ ಲಿಮ್ಕಾ ಬುಕ್‍ನಲ್ಲಿ ದಾಖಲೆ ಬರೆದಿದ್ದಾಳೆ.ಬಾಲಕಿ ಅನನ್ಯ ವರ್ಮಾ ನಗರದ ಮೀರಾ ಅಂತರ ಶಾಲೆಗೆ ಪ್ರವೇಶ ಪಡೆದು ಎಲ್ಲರನ್ನು ಅಚ್ಚರಿ ಮೂಡಿಸಿದ್ದಾಳೆ.
ಇದಕ್ಕೂ ಮುನ್ನ ಬಾಲಕಿಯ ಸಹೋದರಿ ಸುಷ್ಮಾ ವರ್ಮಾ ತನ್ನ ಏಳನೇ ವಯಸ್ಸಿನಲ್ಲೇ ಇದೇ ಶಾಲೆಯಲ್ಲಿ ಓದಿದ್ದು, ಪ್ರಥಮ ದರ್ಜೆಯಲ್ಲಿ ಪಾಸಾಗಿ ಮೂಲಕ ಲಿಮ್ಕಾ ಬುಕ್‍ನಲ್ಲಿ ದಾಖಲೆ ಬರೆದಿದ್ದಳು.
ಸುಷ್ಮಾ ವರ್ಮಾ ತಂಗಿ ಅನನ್ಯ ವರ್ಮಾ ಶಾಲೆಗೆ ಪ್ರವೇಶ ಪಡೆಯುವ ಮೂಲಕ ಅಕ್ಕನ ದಾಖಲೆಯನ್ನು ಸರಿಗಟ್ಟಿದ್ದಾಳೆ. ಹೆಚ್ಚಿನ ಜ್ಞಾನ ಬುದ್ದಿವಂತೆ ಹಾಗೂ ಉತ್ತರ ಪ್ರದೇಶ ಮಂಡಳಿಯ ಅನುಮತಿ ಮೇರೆಗೆ ಬಾಲಕಿಗೆ ಪ್ರವೇಶ ನೀಡಲಾಗಿದೆ ಎಂದು ಜಿಲ್ಲಾ ಶಾಲಾ ತನಿಖಾಧಿಕಾರಿ ಉಮೇಶ್ ತ್ರೀಪಾಠಿ ತಿಳಿಸಿದ್ದಾರೆ.

Comments are closed.