ರಾಷ್ಟ್ರೀಯ

ಅತ್ಯಾಚಾರ, ಹಿಂಸೆ, 10 ಬಾರಿ ಮಾರಾಟ: 10 ವರ್ಷದ ಬಳಿಕ ಮರಳಿದ ಅಪಹೃತೆ

Pinterest LinkedIn Tumblr

rapeನವದೆಹಲಿ: ಕಳೆದ 10 ವರ್ಷದ ಹಿಂದೆ ನಾಪತ್ತೆಯಾಗಿದ್ದ ಬಾಲಕಿ ಇತ್ತೀಚಿಗೆ ಮನೆಗೆ ಮರಳಿದ ಘಟನೆ ನವದೆಹಲಿಯಲ್ಲಿ ನಡೆದಿದೆ. ಕೊನೆಗೂ ಮಗಳು ಹಿಂತಿರುಗಿದಳು ಎಂದು ಸಂಭ್ರಮಿಸಿದ ಪೋಷಕರ ಸಂತೋಷ ಹೆಚ್ಚು ಸಮಯ ಉಳಿಯಲಿಲ್ಲ. ಕಳೆದ 10 ವರ್ಷದ ಕರಾಳ ದಿನಗಳನ್ನು ಆಕೆ ಬಿಚ್ಚಿಡುತ್ತಿದ್ದರೆ ಎಂತವರ ಎದೆಯೂ ನಡಗುವಂತಿತ್ತು.

ಅಪಹೃತವಾಗಿದ್ದ ಆಕೆ ಈ 10 ವರ್ಷಗಳಲ್ಲಿ 10ಕ್ಕೂ ಹೆಚ್ಚು ಬಾರಿ ಮಾರಾಟಗೊಂಡಳು, ನಾಲ್ಕು ರಾಜ್ಯಗಳಿಗೆ ಸಾಗಿಸಲ್ಪಟ್ಟಳು. ಅಷ್ಟೇ ಅಲ್ಲದೇ ಲೆಕ್ಕವಿಲ್ಲದಷ್ಟು ಬಾರಿ ಸಾಮೂಹಿಕ ಅತ್ಯಾಚಾರಕ್ಕೊಳಗಾದಳು ಎಂಬ ಘೋರ ಯಾತನೆಯ ಚಿತ್ರಣ ಬಹಿರಂಗವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 61 ಮತ್ತು 70 ವರ್ಷದ ವೃದ್ಧರನ್ನು ಸೇರಿಸಿ 8 ಜನರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಈಗ 22 ವರ್ಷದವಳಾಗಿರುವ ಯುವತಿ ಕೀಚಕರ ಕೈಯ್ಯಿಂದ ತಪ್ಪಿಸಿಕೊಂಡು ಕಳೆದ ತಿಂಗಳು ಮನೆಗೆ ಹಿಂತಿರುಗಿದ್ದಾಳೆ. 12 ವರ್ಷದವಳಾಗಿದ್ದಾಗ ಸಪ್ಟೆಂಬರ್ 9, 2006ರಲ್ಲಿ ಆಕೆ ಅಪಹರಣಕ್ಕೊಳಗಾಗಿದ್ದಳು. ಈ ಕುರಿತು ಪ್ರಕರಣವೂ ದಾಖಲಾಗಿತ್ತು. ಆದರೆ ಆಕೆ ಪತ್ತೆಯಾಗಿರಲಿಲ್ಲ.

ತನ್ನ ಮನೆಯ ಸಮೀಪವೇ ನನ್ನನ್ನು ಅಪಹರಿಸಲಾಗಿತ್ತು. ಒಬ್ಬ ಮಹಿಳೆ ಮತ್ತು ಪುರುಷ ಮುಖಕ್ಕೆ ಕರ್ಚೀಫ್ ಹಿಡಿದಾಗ ನಾನು ಪ್ರಜ್ಞೆ ಕಳೆದುಕೊಂಡೆ. ಬಳಿಕ ನನ್ನನ್ನು ಪಂಜಾಬ್, ಗುಜರಾತ್‌ಗೆ ಕರೆದೊಯ್ಯಲಾಯಿತು. ಅಲ್ಲೆಲ್ಲ ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಯಿತು. ಬಳಿಕ 10ಕ್ಕೂ ಹೆಚ್ಚು ಬಾರಿ ನನ್ನನ್ನು ಮಾರಲಾಯಿತು ಎಂದು ಯುವತಿ ಘೋರ ಸತ್ಯವನ್ನು ಹೊರ ಹಾಕಿದ್ದಾಳೆ.

Comments are closed.