ನವದೆಹಲಿ: ಪಾಕಿಸ್ತಾನದ ಲಾಹೋರ್ ನಗರದಲ್ಲಿ ದೃಶ್ಯ ಮಾಧ್ಯಮದ ವರದಿಗಾರನೊಬ್ಬ ಎಮ್ಮೆ ಮತ್ತು ಹಸುಗಳ ಸಂದರ್ಶನ ನಡೆಸಿದ ವಿಡಿಯೋ ಈಗ ವೈರಲ್ ಆಗಿದೆ.
ಕಾರಣ ಇಷ್ಟೆ, ರಸ್ತೆ ಸಂಚಾರ ದಟ್ಟಣೆಯಿಂದ ಮುಕ್ತಿ ಪಡೆಯಲು ಸೇತುವೆ ನಿರ್ಮಿಸಿದ್ದಾರೆ. ಆದರೆ ಈ ಸೇತುವೆಗಳನ್ನು ಮನುಷ್ಯರಿಗಿಂತ ಜಾಸ್ತಿ ಬಳಕೆ ಮಾಡಿಕೊಳ್ಳುತ್ತಿರುವುದು ಜಾನುವಾರುಗಳು. ಹಲವು ಮೆಟ್ಟಿಲುಗಳನ್ನು ಸರಸರನೆ ಏರುವ ಹಸು ಮತ್ತು ಎಮ್ಮೆಗಳು ಅಷ್ಟೆ ಸಲೀಸಾಗಿ ಕೆಳಗಿಳಿಯುತ್ತವೆ.
ಇದು ಇವುಗಳ ನಿತ್ಯ ಕಾಯಕವಾಗಿದೆ. ಸೇತುವೆ ಹತ್ತಲು ಇಳಿಯಲು ಕಲಿತಿದ್ದು ಹೇಗೆ? ಎಂಬ ಪ್ರಶ್ನೆಯನ್ನು ನೇರವಾಗಿ ಎಮ್ಮೆಗಳಿಗೆ ಕೇಳಿದ ವರದಿಗಾರ, ರಸ್ತೆ ದಾಟಲು ಸೇತುವೆ ಬಳಸದೆ ರೋಡಿನಲ್ಲಿ ಸರ್ಕಸ್ ಮಾಡುವ ಮನುಜರನ್ನು ಛೇಡಿಸುವ ಮೂಲಕ ಛೀಮಾರಿ ಹಾಕಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Comments are closed.