
ಮಾತು ಮಾತಿಗೂ ಸಿಟ್ಟಾಗುವ, ಹೊಡೆದಾಡುವ, ಆಟದ ಸಾಮಾನುಗಳನ್ನು ತುಂಡರಿಸುವ ಮಕ್ಕಳ ಕುರಿತು ಅವರ ಪೋಷಕರು ಚಿಂತಿತರಾಗುವುದು ಸಹಜ. ಹೀಗೆ ವರ್ತಿಸುವ ಮಕ್ಕಳ ಕುರಿತು ಹೆಚ್ಚು ಗಮನ ಹರಿಸುವುದು ಅತಿ ಅಗತ್ಯ. ಸಾಮಾನ್ಯವಾಗಿ ಮಕ್ಕಳು ಅವರ ಬೇಡಿಕೆಗಳನ್ನು ಪೂರೈಸದಿರುವಾಗ ಮಕ್ಕಳು ಈ ರೀತಿ ವರ್ತಿಸುತ್ತಾರೆ. ಹೀಗಿರುವಾಗ ಪೋಷಕರು ಮಕ್ಕಳ ಬೇಡಿಕೆಗಳನ್ನು ಪೂರೈಸುತ್ತಾ ಹೋಗುತ್ತಾರೆ. ಇದರಿಂದ ಮಕ್ಕಳು ಇನ್ನಷ್ಟು ಹಠವಾದಿಗಳಾಗುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳನ್ನು ಹತೋಟಿಗೆ ತರಲು ಈ ಟಿಪ್ಸ್’ಗಳು ಉಪಯೋಗಕ್ಕೆ ಬರುತ್ತವೆ.
ಮಕ್ಕಳಿಗೆ ಉದಾಹರಣೆಗಳನ್ನು ಕೊಡುವುದು ಅಗತ್ಯ. ತಂದೆ ತಾಯಿಯ ಎದುರು ಈ ರೀತಿ ಸಿಟ್ಟು ಪ್ರದರ್ಶಿಸುವುದು ಸಭ್ಯತನ ಅಲ್ಲ ಎನ್ನುವುದನ್ನು ಮಕ್ಕಳಿಗೆ ಮನವರಿಕೆ ಮಾಡಿಸಬೇಕು.
ಮಕ್ಕಳಿರುವಾಗ ಹಿಂಸಾತ್ಮಕ ದೃಶ್ಯಗಳನ್ನೊಳಗೊಂಡ ಕಾರ್ಯಕ್ರಮಗಳನ್ನು ನೋಡಬೇಡಿ. ಮಕ್ಕಳು ಅತಿ ಶೀಘ್ರವಾಗಿ ಪ್ರತಿ ವಿಚಾರವನ್ನು ಅರಿತುಕೊಳ್ಳುತ್ತಾರೆ.
ನಿಮ್ಮ ಮಕ್ಕಳನ್ನು ಪದೇ ಪದೇ ಸಿಟ್ಟುಗೊಳ್ಳುವವರೊಂದಿಗೆ ಹೆಚ್ಚು ಬೆರೆತುಕೊಳ್ಳದಂತೆ ನೋಡಿಕೊಳ್ಳಿ. ವಿಶೇಷವಾಗಿ ತನ್ನ ಕೋಪವನ್ನು ನಿಯಂತ್ರಿಸಲು ಧ್ಯವಾಗದಿರುವವರೊಂದಿಗೆ ಹೆಚ್ಚು ಬೆರೆತುಕೊಳ್ಳದಂತೆ ನಿಗಾವಹಿಸಿ.
ನಿಮ್ಮ ಮಕ್ಕಳೊಂದಿಗೆ ಅಸಭ್ಯವಾಗಿ ವರ್ತಿಸದಿರಿ. ಇದರಿಂದ ಅವರ ಕೋಪಕ್ಕೆ ನೀವು ಪ್ರೋತ್ಸಾಹ ನೀಡಿದಂತಾಗುತ್ತದೆ.
ಮಕ್ಕಳಿಗೆ ದೈಹಿಕವಾಗಿ ಹಿಂಸಿಸದಿರಿ, ಇದರಿಂದ ಮಕ್ಕಳು ಇನ್ನಷ್ಟು ಉದ್ರೇಕಗೊಳ್ಳುತ್ತಾರೆ.
ಮಕ್ಕಳ ಕೋಪಕ್ಕೆ ಕಾರಣವೇನೆಂಬುವುದನ್ನು ತಿಳಿದುಕೊಳ್ಳಲು ಪ್ರಯತ್ನಿಸಿ, ಕೆಲವೊಂದು ಬಾರಿ ಮಕ್ಕಳು ನಿಮ್ಮ ಗಮನವನ್ನು ತನ್ನತ್ತ ಸೆಳೆಯಲು ಹಾಗೆ ವರ್ತಿಸಬಹುದು.
ಮಕ್ಕಳಿಗೆ ನಿಮ್ಮ ಪ್ರೀತಿಯನ್ನು ತೋರಿಸುವುದು ಅತಿ ಅಗತ್ಯ. ನೀವು ಅವರನ್ನು ಪ್ರೀತಿಸುತ್ತೀರಿ ಎಂಬುವುದನ್ನು ಮನವರಿಕೆಯಾಗುವಂತೆ ಮಾಡಿ.
Comments are closed.