ರಾಷ್ಟ್ರೀಯ

24 ವಾರ ಬೆಳೆದ ಭ್ರೂಣ, ಗರ್ಭಪಾತಕ್ಕೆ ಸುಪ್ರೀಂ ಅನುಮತಿ

Pinterest LinkedIn Tumblr

suprimದೆಹಲಿ: ಅತ್ಯಾಚಾರದಿಂದ ಗರ್ಭಿಣಿಯಾಗಿ 24 ವಾರಗಳ ಅಸಹಜ ಭ್ರೂಣವನ್ನು ಹೊತ್ತಿರುವ ಮಹಿಳೆಗೆ ಗರ್ಭಪಾತಕ್ಕೆ ಅವಕಾಶ ಕಲ್ಪಿಸಲು ಅನುವು ಮಾಡುವ ಮೂಲಕ ಸುಪ್ರೀಂಕೋರ್ಟ್ ಸೋಮವಾರದಂದು ಮಹತ್ವದ ತೀರ್ಪು ನೀಡಿದೆ.

ಮುಂಬೈಯ ನಡೆದ ಅತ್ಯಾಚಾರ ಪ್ರಕರಣದ ಸಂತ್ತಸ್ಥೆ, ತನ್ನ ಗರ್ಭದಲ್ಲಿ ಬೆಳೆಯುತ್ತಿರುವ 24 ವಾರದ ಭ್ರೂಣವನ್ನು ತೆಗೆಸಿಕೊಳ್ಳಲು ಅನುಮತಿ ಕೋರಿ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದ್ದಳು.

ಗರ್ಭಿಣಿಯ ಮಹಿಳೆಗೆ ಚಿಕಿತ್ಸೆ ನೀಡುತ್ತಿರುವ ಮುಂಬೈ ಆಸ್ಪತ್ರೆ ವೈದ್ಯಕೀಯ ಮಂಡಳಿ ‘ಅಸಹಜ ಭ್ರೂಣದ ಬೆಳವಣಿಗೆಯಿಂದ ಗರ್ಭಿಣಿಯ ಜೀವಕ್ಕೆ ಅಪಾಯವಿದೆ’ ಎಂಬ ವರದಿ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ ಗರ್ಭಪಾತಕ್ಕೆ ಅವಕಾಶ ಕಲ್ಪಿಸಿದೆ.

ದೇಶದ ಕಾನೂನಿ ಪ್ರಕಾರ 20 ವಾರಗಳ ನಂತರ ಗರ್ಭಪಾತ ಮಾಡಿಸುವುದು ಅಪರಾಧವಾಗಿದೆ. 20 ವಾರಗಳ ಬಳಿಕ ಗರ್ಭಪಾತ ಮಾಡಿಸುವುದು ತಾಯಿ ಮತ್ತು ಭ್ರೂಣಕ್ಕೆ ಅಪಾಯ ಎನ್ನುವ ಕಾರಣಕ್ಕೆ ಕಾನೂನು ರೂಪಿಸಲಾಗಿದೆ. ಆದರೆ ಈ ಕಾನೂನು ಪ್ರಶ್ನಿಸಿ ಸಂತ್ರಸ್ತ ಮಹಿಳೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಪರಿಗಣಿಸಿದ ಕೋರ್ಟ್ ಇಂದು ಮಹತ್ವದ ತೀರ್ಪು ನೀಡಿದೆ

ತನ್ನನ್ನು ಮದುವೆ ಮಾಡಿಕೊಳ್ಳುತ್ತೇನೆ ಎಂದು ನಂಬಿಸಿ ಮೋಸ ಮಾಡಿದ ಮಾಜಿ ಪ್ರಿಯಕರನಿಂದ ತಾನು ಅತ್ಯಾಚಾರಕ್ಕೆ ಒಳಗಾಗಿದ್ದೇನೆ. ಅಲ್ಲದೆ ಈ ಭ್ರೂಣದಿಂದ ನನ್ನ ಪ್ರಾಣಕ್ಕೆ ಅಪಾಯವಿದ್ದು, ಇದನ್ನು ಗರ್ಭಪಾತ ಮಾಡಿಸಲು ಅನುಮತಿ ನೀಡಬೇಕೆಂದು ಮಹಿಳೆ ಅರ್ಜಿಯಲ್ಲಿ ತಿಳಿಸಿದ್ದಳು. ಮಹಿಳೆಯ ಅರ್ಜಿ ಸಂಬಂಧ ಪರಿಶೀಲನೆಗಾಗಿ ಮುಂಬೈಯ ಕಿಂಗ್ ಎಡ್ವರ್ಡ್ ಮೆಮೋರಿಯಲ್ ಕಾಲೇಜ್ ಮತ್ತು ಆಸ್ಪತ್ರೆಯ ತಜ್ಞರನ್ನು ಒಳಗೊಂಡ ವೈದ್ಯಕೀಯ ಮಂಡಳಿಯನ್ನು ರಚಿಸಲಾಗಿತ್ತು. ವಾದ ಆಲಿಸಿದ ಕೋರ್ಟ್‌ ಮಹಿಳೆಗೆ ಭ್ರೂಣವನ್ನು ತೆಗೆಸಿಕೊಳ್ಳಲು ಇದೀಗ ಅನುಮತಿ ನೀಡಿದೆ.

Comments are closed.