*ಯೋಗೀಶ್ ಕುಂಭಾಸಿ
ಉಡುಪಿ: ನಾಪತ್ತೆಯಾದ ವಿವಾಹಿತೆ ಹಾಗೂ ಆಕೆ ಪ್ರಿಯಕರನ ಅಸ್ಥಿಪಂಜರ ಸ್ಥಿತಿಯಲ್ಲಿದ್ದ ಅವಸೇಷಗಳು ಕಾಡಿನಲ್ಲಿ ಪತ್ತೆಯಾದ ಘಟನೆ ವಂಡಾರುವಿನ ಮಾರ್ವೆ ಎಂಬಲ್ಲಿ ನಡೆದಿದೆ.
ಬಾಬಿ ಹಾಗೂ ರಾಮ ಎನ್ನುವವರ ಅಸ್ಥಿಪಂಜರ ಇದಾಗಿದ್ದು ಬಾಬಿ ಮೂರು ಮಕ್ಕಳ ತಾಯಿ ಆಕೆಯ ಪ್ರಿಯಕರನಾಗಿದ್ದ ರಾಮ ಅವಿವಾಹಿತನಾಗಿದ್ದ.

ವಿವಾಹಿತಳಾಗಿದ್ದ ಬಾಬಿ ಹಾಗೂ ರಾಮ ಎಂಬಿಬ್ಬರ ನಡುವೆ ಗೆಳೆತನವಿದ್ದ ಬಗ್ಗೆ ಊರುಗಳಲ್ಲಿ ಉಹಾಪೋಹವಿತ್ತು. ಈ ಮಾತಿಗೆ ಪುಷ್ಟಿ ನೀಡುವಂತೆ ಬಾಬಿ ಕಾಣೆಯಾದ ದಿನವೇ ರಾಮ ಕೂಡ ಕಾಣೆಯಾಗಿದ್ದ. ಇಬ್ಬರ ನಾಪತೆ ಪ್ರಕರಣದ ಬಗ್ಗೆ ಕುಂದಾಪುರದ ಶಂಕರನಾರಾಯಣ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿತ್ತು. ಕಾಣೆಯಾದವರ ಬಗ್ಗೆ ಪೊಲೀಸರು ಹಾಗೂ ಅವರವರ ಕುಟುಂಬಿಕರು ಮತ್ತು ಸ್ಥಳೀಯರು ಸತತ ಹುಡುಕಾಟ ನಡೆಸಿದರೂ ಕೂಡ ಯಾವುದೇ ಪ್ರಯೋಜನವಾಗಿರಲಿಲ್ಲ.
ಕಾಡಿಗೆ ಕಟ್ಟಿಗೆ ತರಲು ಹೋದ ವೇಳೆ ಮರಕ್ಕೆ ನೇಣು ಹಾಕಿದ ಸ್ಥಿತಿಯಲ್ಲಿ ಹಗ್ಗ ಗೋಚರವಾಗಿದ್ದು ಕೆಳಗೆ ಸ್ಥಿಪಂಜರ ಹಾಗೂ ತಲೆ ಬುರುಡೆ, ಪತ್ತೆಯಾಗಿದೆ. ಬಳಿಕ ಪರಿಶೀಲನೆ ವೇಳೆ ಈ ಕಳೇಬರದ ಕಾಲು ಅಸ್ಥಿಪಂಜರಗಳು ತಿಂಗಳುಗಳ ಹಿಂದೆ ಕಾಣೆಯಾದ ರಾಮ ಹಾಗೂ ಬಾಬಿ ಅವರದ್ದು ಎನ್ನಲಾಗಿದೆ.
ಈ ಬಗ್ಗೆ ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.