ರಾಷ್ಟ್ರೀಯ

ಕೇರಳ: ಸಿಪಿಐ(ಎಂ), ಆರ್‌ಎಸ್ಎಸ್ ಕಾರ್ಯಕರ್ತರ ಹತ್ಯೆ

Pinterest LinkedIn Tumblr

keralaಕಣ್ಣೂರು: ಕೇರಳದ ಕಣ್ಣೂರಿನಲ್ಲಿ ಸೋಮವಾರ ರಾತ್ರಿ ಪ್ರತ್ಯೇಕ ಕಡೆಗಳಲ್ಲಿ ಸಿಪಿಐ(ಎಂ), ಆರ್‌ಎಸ್ಎಸ್ ಕಾರ್ಯಕರ್ತರ ಹತ್ಯೆಯಾಗಿದ್ದು ರಾಜಕೀಯ ಹಿಂಸಾಚಾರ ಮತ್ತೆ ಭುಗಿಲೆದ್ದಿದೆ.

ಪೊಲೀಸ್ ಅಧೀಕ್ಷಕ ಸಂಜಯ್ ಗುರುದ್ದಿನ್ ಹೇಳುವ ಪ್ರಕಾರ , 36 ವರ್ಷದ ಸಿ.ವಿ. ಧನರಾಜ್(ಸಿಪಿಐಎಮ್) ಎಂಬುವವರನ್ನು ಅಪರಿಚಿತ ದುಷ್ಕರ್ಮಿಗಳ ಗುಂಪೊಂದು ಆತನ ಕುಟುಂಬದವರ ಮುಂದೆಯೇ ಕೊಚ್ಚಿ ಹಾಕಿದೆ. ಪಯನ್ನೂರು ಸಮೀಪ ರಾತ್ರಿ 10 ಗಂಟೆಗೆ ಈ ಘಟನೆ ನಡೆದಿದೆ.

ಎರಡು ತಾಸಿನ ನಂತರ ಅಣ್ಣುರ್ ಗ್ರಾಮದಲ್ಲಿ ಆಟೋ ಚಾಲಕ ಸಿ.ಕೆ. ರಾಮಚಂದ್ರನ್ ಎಂಬಾತನನ್ನು ಬೇರೊಂದು ಗುಂಪು ಕೊಲೆಗೈದಿದೆ. ಆತ ಆರ್‌ಎಸ್ಎಸ್ ಕಾರ್ಯಕರ್ತನಾಗಿದ್ದ ಎಂದು ಹೇಳಲಾಗುತ್ತಿದೆ.

ಪಿತೂರಿಯ ಭಾಗವಾಗಿ ಆರ್‌ಎಸ್ಎಸ್ ಈ ಕೃತ್ಯ ನಡೆಸಿದೆ ಎಂದು ಸಿಪಿಐ(ಎಂ) ಕಣ್ಣೂರು ಜಿಲ್ಲಾ ಕಾರ್ಯದರ್ಶಿ ಎಮ್.ವಿ. ಜಯರಾಜನ್ ಆರೋಪಿಸಿದ್ದಾರೆ. ಆರ್‌ಎಸ್ಎಸ್ ಹಿಂಸೆಗೆ ಪ್ರಚೋದಿಸುತ್ತಿವೆ. ಕಳೆದ ವಾರ ಅವರು ತಮ್ಮ ಹಿಟ್ ಲಿಸ್ಟ್‌ಲ್ಲಿರುವವರನ್ನು ಬಹಿರಂಗವಾಗಿ ಘೋಷಿಸಿದ್ದರು ಎಂದು ಜಯರಾಜನ್ ಹೇಳಿದ್ದಾರೆ.

Comments are closed.