ರಾಷ್ಟ್ರೀಯ

ಗಡಿಯಿಂದ ನುಸುಳಲು ಯತ್ನಿಸಿದ ಉಗ್ರರ ಗುಂಡೇಟಿಗೆ ಓರ್ವ ಯೋಧ ಬಲಿ

Pinterest LinkedIn Tumblr

army-2ಶ್ರೀನಗರ: ಜಮ್ಮು-ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿ ಯೋಧನನ್ನು ಉಗ್ರಗಾಮಿಗಳು ಹತ್ಯೆ ಮಾಡಿದ್ದಾರೆ.

ಕೂಪ್ವಾರ ಜಿಲ್ಲೆಯ ಗಣಿ ನಿಯಂತ್ರಣ ರೇಖೆಯ ಬಳಿಯ ಮೂಲಕ ಪಾಕಿಸ್ತಾನದಿಂದ ನುಸುಳಲು ಯತ್ನಿಸಿದ ಉಗ್ರರು- ಸೇನಾ ಪಡೆ ನಡುವೆ ನಡೆದ ಗುಂಡಿನ ದಾಳಿಯಲ್ಲಿ ಸೇನೆಯ ಓರ್ವ ಯೋಧ ಮೃತಪಟ್ಟಿದ್ದಾರೆ. ಸೇನಾ ಪಡೆಯ ಮೇಲೆ ಗುಂಡಿನ ದಾಳಿ ನಡೆಸಿ ಭಾರತದೊಳಗೆ ನುಗ್ಗಲು ಶಸ್ತ್ರಸಜ್ಜಿತವಾದ ಗುಂಪು ಯತ್ನಿಸಿದೆ ಈ ದಾಳಿಯಲ್ಲಿ ಓರ್ವ ಯೋಧ ಮೃತಪಟ್ಟಿದ್ದಾರೆ ಎಂದು ರಕ್ಷಣಾ ಸಚಿವಾಲಯ ಸ್ಪಷ್ಟಪಡಿಸಿದೆ.

ಬಾಂಗ್ಲಾದೇಶದ ಗಡಿ ಮೂಲಕ 10 ಉಗ್ರರ ಗುಂಪೊಂದು ಭಾರತದ ಗಡಿಗೆ ಬಂದಿದ್ದು, ದೇಶದೊಳಗೆ ನುಸುಳಲು ಯತ್ನಿಸುತ್ತಿದ್ದಾರೆ ಎಂಬ ಎಚ್ಚರಿಕೆ ಬೆನ್ನಲ್ಲೇ ಪಾಕಿಸ್ತಾನದಿಂದ ಉಗ್ರರು ಭಾರತದೊಳಗೆ ನುಸುಳಲು ಯತ್ನಿಸಿದ್ದು ಸೇನಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.

Comments are closed.