ಜಮ್ಮು: ಮೂರು ದಿನಗಳ ಹಿಂದೆ ರದ್ದಾಗಿದ್ದ ಅಮರನಾಥ ಯಾತ್ರೆ ಸೋಮವಾರ ಮಧ್ಯಾಹ್ನದಿಂದ ಪುನರಾರಂಭವಾಗಿದ್ದು, ಭಕ್ತಾದಿಗಳು ಜಮ್ಮು ನಗರದಿಂದ ಕಾಶ್ಮೀರ ಕಣಿವೆಯತ್ತ ಹೊರಟಿದ್ದಾರೆ.
“ಜಮ್ಮು ನಗರದ ಭಗವತಿ ನಗರದಿಂದ ಸುಮಾರು ಮಧ್ಯಾಹ್ನ 4:20 ಕ್ಕೆ 40 ಬಸ್ ಗಳಲ್ಲಿ ಅಮರನಾಥ ಯಾತ್ರಾತ್ರಿಗಳು ಹೊರಟಿದ್ದಾರೆ” ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
“ಈ ಯಾತ್ರಿಗಳ ಪ್ರಯಾಣಕ್ಕೆ ಭದ್ರತಾ ಪಡೆಗಳು ರಕ್ಷಣೆ ಒದಗಿಸುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ.
ಕಾಶ್ಮೀರದಲ್ಲಿ ಭುಗಿಲೆದ್ದ ಹಿಂಸಾಚಾರದಿಂದ ಕಳೆದ ಮೂರು ದಿನಗಳಿಂದ ಕಾಶ್ಮೀರ ಯಾತ್ರೆ ರದ್ದುಗೊಂಡಿತ್ತು ಮತ್ತು ಈ ಸಂದರ್ಭದಲ್ಲಿ ಯಾವುದೇ ಭಕ್ತಾದಿ ಪ್ರಯಾಣ ಕೈಗೊಳ್ಳಲು ಅವಕಾಶ ನೀಡಿಲ್ಲ ಎಂದು ಅಧಿಕಾರಿ ಹೇಳಿದ್ದಾರೆ.
ಯಾತ್ರೆ ಮುಗಿಸಿರುವ ಭಕ್ತಾದಿಗಳು 200 ಬಸ್ ಗಳಲ್ಲಿ ಜಮ್ಮು ನಗರಕ್ಕೆ ಹಿಂದಿರುಗಿದ್ದು, ಅವರುಗಳು ತಮ್ಮ ಪ್ರದೇಶಗಳಿಗೆ ಹಿಂದಿರುಗಲು ವಿಶೇಷ ರೈಲಿನ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Comments are closed.