
ಬೆಂಗಳೂರು: ಮಕ್ಕಳನ್ನು ರಾಸಾಯನಿಕ ಜಂಕ್ಫುಡ್ಗಳಿಂದ ದೂರ ಮಾಡದಿದ್ದರೆ ಪೋಷಕರು ಮುದೊಂದು ದಿನ ಭಾರೀ ಬೆಲೆ ತೆತ್ತಬೇಕಾಗುತ್ತದೆ ಎಂದು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ವಸುಂಧರಾ ಭೂಪತಿ ಎಚ್ಚರಿಸಿದ್ದಾರೆ.
ನಗರದ ಕುಮಾರಪಾರ್ಕ್ನ ಭಾರತ ವಿದ್ಯಾನಿಕೇತನ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ-ಆಹಾರ-ಆಯುರ್ವೇದ ಕುರಿತ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಕ್ಕಳ ಬೆಳವಣಿಗೆಗೆ ಪೋಷಕ ಆಹಾರ ಬಹಳ ಅಗತ್ಯ.
ರಾಸಾಯನಿಕಯುಕ್ತ ಜಂಕ್ ಪುಡ್ ಅಲ್ಲ. ಮನೆಗಳಲ್ಲಿ ತಾಯಿಂದಿರರು ಮಾಡುವ ರಾಗಿ, ಸಜ್ಜೆ, ಕಡಲೆ, ಸೊಪ್ಪು ತರಕಾರಿಗಳಿಂದ ಮಾಡಿದ ದೇಸಿಯಾ ಆಹಾರ ಪದಾರ್ಥಗಳು. ಇವು ಮಕ್ಕಳ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಅಗತ್ಯ ಪೋಷಕಾಂಶವನ್ನು ನೀಡುತ್ತವೆ ಎಂದರು. ಡಾ.ರೂಪ ಮಾತನಾಡಿ, ಆರೋಗ್ಯಕ್ಕೆ ಯಾರೂ ಬೆಲೆ ಕಟ್ಟಲಾರರು. ಆರೋಗ್ಯವೇ ಸಂಪತ್ತು. ಹಣ, ಅಂತಸ್ತು, ಅಧಿಕಾರ ಇದ್ದರೂ ಆರೋಗ್ಯ ಇಲ್ಲದಿದ್ದರೆ ಏನು ಪ್ರಯೋಜನ. ಅದಕ್ಕಾಗಿ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ ಎಂದು ಕಿವಿಮಾತು ಹೇಳಿದರು.
ಮಹಾನಸ ಹೆಲ್ತ್ ಕಿಚನ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಡಾ. ಅರ್ಚನಾ ಮಾತನಾಡಿ, ಮಕ್ಕಳು ಆಹಾರದಿಂದ ಹೇಗೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂಬುವುದರ ಬಗ್ಗೆ ವಿವರ ನೀಡಿದರು. ಆರೋಗ್ಯ ನಂದನ ಯೋಜನೆಯ ಸಂಚಾಲಕ ಡಾ.ಎನ್.ವಿ.ರಮೇಶ್, ಮುಖಂಡರಾದ ಶ್ರೀಕೃಷ್ಣ, ಡಾ. ಜಯಪ್ರಕಾಶ್, ಟ್ರಸ್ಟಿಗಳಾದ ಎಸ್.ಎನ್.ಅತ್ತಿ ಮತ್ತು ಮುಖೇಶ್, ಪ್ರಾರ್ಚಾಯರಾದ ಉಷಾಶೇಖರ್ ಮುಂತಾದವರು ಪಾಲ್ಗೊಂಡಿದ್ದರು.
Comments are closed.