ರಾಷ್ಟ್ರೀಯ

ಐಸಿಸ್ ಉಗ್ರರು ನರಕದ ನಾಯಿಗಳು!: ಅಸಾದುದ್ದೀನ್‌ ಓವೈಸಿ

Pinterest LinkedIn Tumblr

Asaduddin Owaisiಹೈದರಾಬಾದ್‌ : ಇಸ್ಲಾಮಿಕ್‌ ಸ್ಟೇಟ್‌ ಸಂಘಟನೆಯ ಉಗ್ರರು ನರಕದ ನಾಯಿಗಳು ಎಂದು ಕರೆದಿರುವ ಅಸಾದುದ್ದೀನ್‌ ಓವೈಸಿ, ಐಸಿಸ್‌ ಉಗ್ರ ಸಂಘಟನೆಯನ್ನು ಕೊನೆಗೊಳಿಸಲು ಭಾರತದಲ್ಲಿರುವ ವಿವಿಧ ಪಂಗಡಗಳ ಮುಸ್ಲಿಮರು ಒಗ್ಗೂಡಬೇಕು ಎಂದು ಕರೆ ನೀಡಿದ್ದಾರೆ.

ಮಜ್‌ಲಿಸ್‌ ಎ ಇತ್ತೆಹಾದುಲ್‌ ಮುಸ್ಲಿಮೀನ್‌ ಸಂಘಟನೆಯ ಮುಖ್ಯಸ್ಥನಾಗಿರುವ ಅಸಾದುದ್ದೀನ್‌ ಓವೈಸಿ ಅವರು ಹೈದರಾಬಾದ್‌ನಲ್ಲಿ ಪಕ್ಷದ ಪ್ರಧಾನ ಕಾರ್ಯಾಲಯ ಏರ್ಪಡಿಸಿದ್ದ ಜಲ್ಸಾ ದಲ್ಲಿ ಮಾತನಾಡುತ್ತಿದ್ದರು.

“ಇಸ್ಲಾಮಿಕ್‌ ಸ್ಟೇಟ್‌ ಉಗ್ರ ಸಂಘಟನೆ ಐಸಿಸ್‌ ಇಡಿಯ ಮನುಕುಲಕ್ಕೆ ಮಾರಕವಾಗಿದೆ. ಮುಸ್ಲಿಮ್‌ ಯುವಕರು ಇದರ ಬೋನಿಗೆ ಬೀಳಕೂಡದು. ಐಸಿಸ್‌ ಉಗ್ರರು ಇಸ್ಲಾಮ್‌ಗೆ ಸಂಬಂಧಿಸಿದವರೇ ಅಲ್ಲ; ಆದುದರಿಂದ ಮುಸ್ಲಿಮರೆಲ್ಲರೂ ಒಗ್ಗೂಡಿ ಈ ಐಸಿಸ್‌ ಅನ್ನು ಕೊನೆಗೊಳಿಸಬೇಕು’ ಎಂದು ಓವೈಸಿ ಹೇಳಿದರು.

“ಮುಸ್ಲಿಂ ಯುವಕರೇ, ನೀವು ಇಸ್ಲಾಂ ಗಾಗಿ ಮತ್ತು ಮನುಕುಲಕ್ಕಾಗಿ ಬದುಕಬೇಕೇ ಹೊರತು ಇಸ್ಲಾಂ ಗಾಗಿ ಸಾಯಬಾರದು. ನೀವು ನಿಜಕ್ಕೂ ಜಿಹಾದ್‌ ಕೈಗೊಳ್ಳಬಯಸುವಿರಾದರೆ ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಳ್ಳಬಾರದು. ಬಡವರಿಗೆ ಉಣಿಸಲು, ಅವರ ಮಕ್ಕಳಿಗೆ ಮದುವೆ ಮಾಡಿಸಲು, ಅವರ ಕಲ್ಯಾಣಕ್ಕಾಗಿ ದುಡಿಯಲು ನಿಮ್ಮನ್ನು ಮೀಸಲಿಡಬೇಕು’ ಎಂದು ಓವೈಸಿ ಹೇಳಿದ್ದಾರೆ.
-ಉದಯವಾಣಿ

Comments are closed.