ದುಬೈ: ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಸೇರಲು ಯುವಕರು ತವಕಿಸುತ್ತಿದ್ದಾರೆ. ಅಂತೆ ಸೌದಿ ಅರೇಬಿಯಾದಲ್ಲಿ ಅವಳಿ ಯುವಕರು ಇಸಿಸ್ ಸೇರಲು ತಡೆದ ತಾಯಿಯನ್ನೇ ಕೊಲೆ ಮಾಡಿದ್ದಾರೆ.
ಜೂನ್ 24 ರಂದು ಸೌದಿಯಲ್ಲಿ ಈ ಭೀಭತ್ಸ ಕೃತ್ಯ ನಡೆದಿದ್ದು ಸೌದಿ ಅರೇಬಿಯಾ ಮಂದಿ ಚಿಂತೆಗೀಡಾಗುವಂತೆ ಮಾಡಿದೆ. ಸಣ್ಣ ಪುಟ್ಟ ತಪ್ಪುಗಳಿಗೆ ಸೌದಿಯಲ್ಲಿ ಘೋರ ಶಿಕ್ಷೆ ನೀಡಲಾಗುತ್ತದೆ. ಅಂತಹದರಲ್ಲಿ ಈ ಅವಳಿಗಳು ಯಾವುದೇ ಭಯವಿಲ್ಲದೆ ತನ್ನ ತಾಯಿಯನ್ನೇ ದಾರುಣವಾಗಿ ಕೊಲೆ ಮಾಡಿದ್ದಾರೆ.
ಖಲೀದ್ ಮತ್ತು ಸಲ್ಹೆ ಅಲ್ ಒರೈನಿ ಅವಳಿ ಯುವಕರು 67 ವರ್ಷದ ಹೈಲಾರನ್ನು ಕೊಲೆ ಮಾಡಿದ್ದಾರೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈ ಅವಳಿಗಳಿಬ್ಬರನ್ನು ಬಂಧಿಸಿದ್ದಾರೆ.
ಇತ್ತೀಚೆಗೆ ಯುವ ಮನಸ್ಸುಗಳು ಕ್ರೋಧದೆಡೆ ವಾಲುತ್ತಿದ್ದು, ಮೊನ್ನೆ ಮೊನ್ನೆ ನಡೆದ ಢಾಕಾ ಉಗ್ರ ದಾಳಿ ಇದಕ್ಕೆ ಸಾಕ್ಷಿಯಾಗಿದೆ. ಅಲ್ಲಿ ದಾಳಿ ನಡೆಸಿದ ಯುವಕರು ಉತ್ತಮ ಶಿಕ್ಷಣ ಪಡೆದಿದ್ದರು. ಇಂತ ಯುವ ಮನಸ್ಸುಗಳನ್ನು ತಮ್ಮ ಸಂಘಟನೆಗೆ ಸೇರಿಸಿಕೊಳ್ಳಲು ಇಸಿಸ್ ಸಹ ಸಾಮಾಜಿಕ ಜಾಲತಾಣಗಳನ್ನು ಅದ್ಭುತವಾಗಿ ಬಳಸಿಕೊಳ್ಳುತ್ತಿದೆ.
Comments are closed.