ಮುಂಬೈ: ಸದ್ಯ ಸಾಲದಿಂದ ಕುಸಿದಿರುವ ಮದ್ಯದೊರೆ ವಿಜಯ್ ಮಲ್ಯ, ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಗಾಗಿ ಜುಲೈ 27 ರಂದು ಪಿಎಮ್ಎಲ್ಎ ನ್ಯಾಯಾಲಯಕ್ಕೆ ಹಾಜರಾಗದಿದ್ದರೆ ಅವರನ್ನು ಘೋಷಿತ ಅಪರಾಧಿ ಎಂದು ಘೋಷಿಸಲಾಗುವುದಾಗಿ ಕೋರ್ಟ್ ಅಂತಿಮ ಎಚ್ಚರಿಕೆ ನೀಡಿದೆ.
900 ಕೋಟಿ ರೂಪಾಯಿ ಐಡಿಬಿಐ ಮತ್ತು ಕಿಂಗ್ಫಿಶರ್ ಏರಲೈನ್ಸ್ ಸಾಲ ಮರುಪಾವತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಕೋರಿಕೆಯ ಮೇಲೆ ಹಣ ದುರುಪಯೋಗ ವಿರೋಧಿ ನ್ಯಾಯಾಲಯ ಜೂನ್ 14 ರಂದು ಕ್ರಿಮಿನಲ್ ಪ್ರೊಸೀಜರ್ ಕೋಡ್ 82 ವಿಭಾಗದ ಅಡಿಯಲ್ಲಿ ಅಂತಿಮ ಎಚ್ಚರಿಕೆಯ ಸಂದೇಶ ರವಾನಿಸಿದೆ.
ನ್ಯಾಯಾಲಯ ವಿಜಯ್ ಮಲ್ಯ ಅವರಿಗೆ ಅಧಿಕೃತ ಮೂಲಗಳ ಪ್ರಕಾರ ಕೋರ್ಟ್ ಆದೇಶವನ್ನು ತಲುಪಿಸಿದೆ. ಆದೇಶದ ಪ್ರತಿಯನ್ನು ಕಾನೂನಿನ ಪ್ರಕಾರ ಅಂತಾರಾಷ್ಟ್ರೀಯ, ರಾಷ್ಟ್ರೀಯ ಮಟ್ಟದ ಪತ್ರಿಕೆಗಳಲ್ಲಿ ಪ್ರಕಟಿಸಲಾಗುತ್ತದೆ ಎಂದು ಕೋರ್ಟ್ ತಿಳಿಸಿದೆ,
ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮದ್ಯದ ದೊರೆ ವಿಜಯ್ ಮಲ್ಯ ಜುಲೈ 27 ರೊಳಗಾಗಿ ಕೋರ್ಟ್ಗೆ ಹಾಜರಾಗದಿದ್ದಲ್ಲಿ ಅವರನ್ನು ಘೋಷಿತ ಅಪರಾಧಿ ಎಂದು ಪರಿಗಣಿಸಲಾಗುತ್ತದೆ ಎಂದು ನ್ಯಾಯಲಯ ಆದೇಶ ಹೊರಡಿಸಿದೆ.
Comments are closed.