ಬೆಂಗಳೂರು, ಜೂ. ೨೭ – ಮನೆಗೆ ನಡೆದು ಹೋಗುತ್ತಿದ್ದ ಬಡಗಿಯೊಬ್ಬರನ್ನು ಡ್ರಾಗರ್‌ನಿಂದ ಚುಚ್ಚಿ ಬೆದರಿಸಿದ ದುಷ್ಕರ್ಮಿಗಳು 20 ಸಾವಿರ ನಗದು ದೋಚಿ ಪರಾರಿಯಾಗಿರುವ ದುರ್ಘಟನೆ ಮಹಾಲಕ್ಷ್ಮಿ ಲೇಔಟ್‌ನ ಜೆಸಿ ನಗರ ಮುಖ್ಯ ರಸ್ತೆಯಲ್ಲಿ ನಿನ್ನೆ ಮಧ್ಯರಾತ್ರಿ ನಡೆದಿದೆ.
ಕುರುಬರಹಳ್ಳಿಯ ಶಿವಶಂಕರ್ ಅವರು ರಾತ್ರಿ 11.30ರ ವರೆಗೆ ಬಾರ್ ಒಂದರಲ್ಲಿ ಸ್ನೇಹಿತರೊಂದಿಗೆ ಕಂಠಪೂರ್ತಿ ಕುಡಿದು ಸಂದೀಪ್ ಎಂಬಾತನಿಗೆ ಸಾಲ ನೀಡಿದ್ದ 50 ಸಾವಿರ ರೂ.ಗಳನ್ನು ಪಡೆದುಕೊಂಡು ಮನೆಗೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಅಡ್ಡಗಟ್ಟಿ ಡ್ರಾಗರ್‌ನಿಂದ ಕೈಗೆ ಚುಚ್ಚಿ ಬೆದರಿಸಿ 20 ಸಾವಿರ ಕಸಿದುಕೊಂಡು ಪರಾರಿಯಾಗಿದ್ದಾರೆ. ಮೊದಲಿಗೆ ಶಿವಶಂಕರ್ 3 ಲಕ್ಷ ದುಷ್ಕರ್ಮಿಗಳು ಕಸಿದಿದ್ದಾರೆ ಎಂದು ದೂರು ನೀಡಿದ್ದು, ನಂತರ ವಿಚಾರಣೆಯಲ್ಲಿ 30 ಸಾವಿರ ಎಂದು ಹೇಳಿದ್ದಾನೆ.
ಆದರೆ, ಸ್ನೇಹಿತ ಸಂದೀಪ್ ನಿನ್ನೆ ರಾತ್ರಿ ನೀಡಿದ್ದು 50 ಸಾವಿರವಾಗಿದ್ದು, ಅದರಲ್ಲಿ 30 ಸಾವಿರ ಶಿವಶಂಕರ್ ಬಳಿ ಇತ್ತು. ಶಿವಕುಮಾರ್‌ನನ್ನೇ ಹೆಚ್ಚಿನ ವಿಚಾರಣೆಗೆ ಒಳಪಡಿಸಿರುವ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಸುರೇಶ್ ತಿಳಿಸಿದ್ದಾರೆ.
Comments are closed.