ರಾಷ್ಟ್ರೀಯ

ಲೈಂಗಿಕ ಕ್ರಿಯೆ ನಡೆಸಲು 10 ವರ್ಷದ ಬಾಲಕನನ್ನು ಬಲವಂತ ಮಾಡಿದ 16 ವರ್ಷದ ಅಪ್ರಾಪ್ತೆ! ಈ ವೇಳೆ ಮರ್ಮಾಂಗಕ್ಕೆ ತೀವ್ರ ಗಾಯಗೊಂಡ ಬಾಲಕ ಆಸ್ಪತ್ರೆಗೆ ದಾಖಲು

Pinterest LinkedIn Tumblr

3

ಲಖನೌ: 16 ವರ್ಷದ ಅಪ್ರಾಪ್ತೆಯೋರ್ವಳು ತನ್ನೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ 10 ವರ್ಷದ ಬಾಲಕನನ್ನು ಒತ್ತಾಯಿಸಿರುವ ವಿಲಕ್ಷಣ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಉತ್ತರ ಪ್ರದೇಶದ ಕೌಲ್ಹೌಲಿಯಲ್ಲಿ 16 ವರ್ಷದ ಅಪ್ರಾಪ್ತೆ ನೆರೆ ಮನೆಯ ಅಪ್ರಾಪ್ತ ಬಾಲಕನೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ಯತ್ನಿಸಿದ್ದಾಳೆ, ಆದರೆ ಬಾಲಕ ಅಪ್ರಾಪ್ತನಾಗಿದ್ದ ಕಾರಣ ಲೈಂಗಿಕ ಕ್ರಿಯೆ ನಡೆಸಲು ಯತ್ನಿಸುತ್ತಿದ್ದಂತೆ ಆತನ ಮರ್ಮಾಂಗಕ್ಕೆ ಗಾಯಗಳುಂಟಾಗಿದ್ದು, ರಕ್ತಸ್ರಾವವಾಗಿದೆ.

ಘಟನೆಯಿಂದ ತೀವ್ರವಾಗಿ ಘಾಸಿಗೊಳಗಾಗಿರುವ ಬಾಲಕನನ್ನು ಖಾನ್ಪುರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ. ಪೊಲೀಸರಿಗೆ ಈ ಘಟನೆ ಬಗ್ಗೆ ಮಾಹಿತಿ ದೊರೆತಿದ್ದು, ಲೈಂಗಿಕ ಕ್ರಿಯೆಗೆ ಯತ್ನಿಸಿದ ಬಾಲಕಿ ಹಾಗೂ ಸಂತ್ರಸ್ತ ಬಾಲಕ ಇಬ್ಬರೂ ಅಪ್ರಾಪ್ತರಾಗಿರುವುದರಿಂದ ಪ್ರಕರಣವನ್ನು ಯಾವ ಐಪಿಸಿ ಸೆಕ್ಷನ್ ಅಡಿ ದಾಖಲಿಸಿಕೊಳ್ಳಬೇಕೆಂಬ ಗೊಂದಲದಲ್ಲಿದ್ದಾರೆ. ಪೋಸ್ಕೊ ಕಾಯ್ದೆಯಡಿ ಪ್ರಕರಣ ದಾಖಲಿಸಬಹುದೆಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Comments are closed.