ನವದೆಹಲಿ(ಪಿಟಿಐ): ಪ್ರಜಾಪ್ರಭುತ್ವ ನಮ್ಮ ಶಕ್ತಿ. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಬೇಕು ಹಾಗೂ ಅದನ್ನು ನಾವು ಪಾಲಿಸಬೇಕು. ಆದಾಯ ಗಳಿಕೆ ಮುಚ್ಚಿಟ್ಟೀರಿ ಜೋಕೆ… ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ‘ಮನ್ ಕೀ ಬಾತ್’ನಲ್ಲಿ ಹೇಳಿದರು.
ಏಕಕಾಲದಲ್ಲಿ 20 ಉಪಗ್ರಹಗಳನ್ನು ಉಡಾವಣೆ ಮಾಡಿರುವುದು ಇಸ್ರೋದ ಐತಿಹಾಸಿಕ ಸಾಧನೆ ಎಂದು ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು.
ಸೆಪ್ಟೆಂಬರ್ 30ರೊಳಗೆ ಆದಾಯ ತೆರಿಗೆ ಪಾವತಿಸಿ. ಪ್ರತಿಯೊಬ್ಬರೂ ತಮ್ಮ ಮುಚ್ಚಿಟ್ಟ ಆದಾಯವನ್ನು ಬಹಿರಂಗಪಡಿಸಬೇಕು ಎಂದು ಕರೆಕೊಟ್ಟ ಪ್ರಧಾನಿ, ತಪ್ಪಿದಲ್ಲಿ ಸೂಕ್ತ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ತುರ್ತು ಪರಿಸ್ಥಿತಿ ದೇಶಕ್ಕೆ ಕಪ್ಪು ಚುಕ್ಕೆ ಇದ್ದಹಾಗೆ ಎಂದ ಅವರು, ಬಿಜೆಪಿ ಸರ್ಕಾರದ ಎರಡು ವರ್ಷದ ಸಾಧನೆಗಳನ್ನು ತೆರೆದಿಟ್ಟರು.
Comments are closed.