ಕರಾವಳಿ

ಬಾಳಿಗ ಹತ್ಯೆ ಪ್ರಕರಣ : ಚಾರ್ಜ್ ಶೀಟ್ ಸಲ್ಲಿಕೆ – ನರೇಶ್ ಶೆಣೈ ಪ್ರಮುಖ ಆರೋಪಿ

Pinterest LinkedIn Tumblr

Baliga_naresh_shenoy

ಮಂಗಳೂರು, ಜೂ.23: ಮಂಗಳೂರಿನ ಆರ್ ಟಿ ಐ ಕಾರ್ಯಕರ್ತ ವಿನಾಯಕ್ ಪಿ. ಬಾಳಿಗಾರ ಕೊಲೆ ನಡೆದು ಪೂರ್ತಿ ಮೂರು ತಿಂಗಳು ಕಳೆದ ಬಳಿಕ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಗುರುವಾರ ನಗರ ಪೊಲೀಸರು ಮಂಗಳೂರು ನ್ಯಾಯಾಲಯಕ್ಕೆ 770 ಪುಟಗಳುಳ್ಳ ಪ್ರಾಥಮಿಕ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದಾರೆ.

ದೋಷಾರೋಪಣ ಪಟ್ಟಿಯಲ್ಲಿ ನರೇಶ್ ಶೆಣೈಯನ್ನು ಪ್ರಕರಣದ ಪ್ರಮುಖ ಆರೋಪಿ ಎಂದು ಗುರುತಿಸಲಾಗಿದೆ. ಶ್ರೀಕಾಂತ್, ಶಿವ, ವಿನೀತ್ ಪೂಜಾರಿ, ನಿಶಿತ್ ದೇವಾಡಿಗ, ಶೈಲೇಶ್ ಮತ್ತು ಮಂಜುನಾಥ ಶೆಣೈ ಇತರ ಆರೋಪಿಗಳಾಗಿ ತಿಳಿಸಲಾಗಿದೆ.

ನಗರ ಪೊಲೀಸ್ ಕಮೀಷನರ್ ಚಂದ್ರಶೇಖರ್ ನಿರ್ದೇಶದಲ್ಲಿ ಪ್ರಕರಣದ ತನಿಖಾಧಿಕಾರಿಯಾಗಿರುವ ಎಸಿಪಿ ತಿಲಕ್‌ಚಂದ್ರ ಅವರು ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿ ಮಂಗಳೂರಿನ 3ನೆ ಹೆಚ್ಚುವರಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದಾರೆ. ಬಾಳಿಗಾ ಕೊಲೆ ಪ್ರಕರಣದಲ್ಲಿ ಇತ್ತೀಚೇಗಷ್ಟೆ ಬಂಧನಕ್ಕೊಳಗಾಗಿ ಸದ್ಯ ಪೊಲೀಸ್ ಕಸ್ಟಡಿಯಲ್ಲಿರುವ ಶೀಕಾಂತ್ ಎಂಬಾತನಿಂದ ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಗಳು ಲಭ್ಯವಾಗಿದೆ ಎನ್ನಲಾಗಿದೆ.

ಪ್ರಮುಖ ಆರೋಪಿಯಾಗಿರುವ ನರೇಶ್ ಶೆಣೈಯ ಬ್ಯಾಂಕ್ ಖಾತೆಯನ್ನು ಸ್ತಬ್ಧಗೊಳಿಸಿದ ಮಾಹಿತಿ, ಆತನಲ್ಲಿದ್ದ ನಾಲ್ಕೈದು ದ್ವಿಚಕ್ರವಾಹನಗಳು, ಆರೋಪಿಗಳು ಕೊಲೆಗೆ ಬಳಸಿದ ಆಯುಧಗಳು, ಆಟೋರಿಕ್ಷಾ, ಕ್ವಾಲಿಸ್ ಕಾರು, ರಿಟ್ಜ್ ಕಾರುಗಳನ್ನು ಸ್ವಾಧೀನಪಡಿಸಿರುವುದನ್ನು ವಿವರಿಸಲಾಗಿದೆ. ಹೆಚ್ಚುವರಿ ಆರೋಪಪಟ್ಟಿಯನ್ನು ಪೊಲೀಸರು ಶೀಘ್ರ ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ.

ಮಾರ್ಚ್ 21ರಂದು ಹತ್ಯೆ :

ಮಾರ್ಚ್ 21ರಂದು ಮಂಗಳೂರು ನಗರದ ಬೆಸೆಂಟ್ ಕಾಲೇಜಿನ ಸಮೀಪ, ಪಿ.ವಿ.ಎಸ್.ಕಲಾಕುಂಜದ ಎದುರಿನ ಓಣಿಯೊಂದರಲ್ಲಿ ವಿನಾಯಕ ಪಾಂಡುರಂಗ ಬಾಳಿಗರನ್ನು ಅವರ ನಿವಾಸದ ಎದುರೆ ದುಷ್ಕರ್ಮಿಗಳು ಹತ್ಯೆಗೈದಿದ್ದರು. ಅಂದು ವಿನಾಯಕ ಪಾಂಡುರಂಗ ಬಾಳಿಗರವರು ಪ್ರತೀ ದಿನದಂತೆ ಬೆಳಿಗ್ಗೆ 05-45 ಗಂಟೆಗೆ ವೆಂಕಟರಮಣ ದೇವಸ್ಥಾನಕ್ಕೆ ಹೋಗಲು ತನ್ನ ಸ್ಕೂಟರ್ ಹೋಂಡಾ ಪ್ಲೆಸರ್ ಕೆ.ಎ.19.ಇ.ಡಿ 3098 ರಲ್ಲಿ ಮನೆಯಿಂದ ಹೊರಟು ಸುಮಾರು 75 ಮೀಟರ್ ದೂರ ಹೋಗುವಷ್ಟರಲ್ಲಿ ವಿನಾಯಕ ಪಾಂಡುರಂಗ ಬಾಳಿಗರನ್ನು ತಡೆದು ನಿಲ್ಲಿಸಿದ ಮೂವರು ವ್ಯಕ್ತಿಗಳು ಯದ್ವಾತದ್ವಾ ತಲವಾರಿನಿಂದ ಕಡಿದು ಅವರು ಬಂದ ಬೈಕ್ ನಲ್ಲಿ ಪರಾರಿಯಾಗಿದ್ದರು,

Comments are closed.