
A Hindu Marriage Tradition
ದೇವಘರ್: ಪ್ರೀತಿಗೆ ಜಾತಿ, ವಯಸ್ಸು, ಅಂತಸ್ತು .. ಹೀಗೆ ಯಾವುದು ಅಡ್ಡಿ ಬರುವುದಿಲ್ಲ. ಪ್ರೀತಿಯ ಮುಂದೆ ಎಲ್ಲವೂ ನಗಣ್ಯವೆನಿಸುತ್ತದೆ. ಪ್ರೀತಿಸಿದವರಿಗೆ ಒಂದೇ ಗುರಿ ಇರುತ್ತದೆ. ಹೇಗಾದರೂ ಮಾಡಿ ಪ್ರೀತಿಸಿದವರನ್ನು ಪಡೆಯುವುದು. ಹೌದು ಇದ್ಯಾವುದೋ ಪ್ರೇಮ ಕಥೆಯಲ್ಲ. ಇದು ತನ್ನ ಪ್ರೇಮಿಯನ್ನು ದಕ್ಕಿಸಿಕೊಳ್ಳಲು ಐಎಎಸ್ ಕೆಲಸವನ್ನೇ ಬಿಟ್ಟ ಪ್ರತಿಷ್ಠಿತಳೊಬ್ಬಳ ಕಥೆ.
ಹೌದು… ಬಿಹಾರದ ಐಎಎಸ್ ಅಧಿಕಾರಿಣಿ ಇಂದಿರಾ ದಾಸ್ಗೂ ನೇಪಾಳದ ಸಂಸದ ಜಗದೀಶ್ ಪ್ರಸಾದ್ ಅವರಿಗೆ ಕೆಲ ತಿಂಗಳಿಂದ ಪ್ರೇಮವಾಗಿದೆ. ನಿನ್ನೆ ಪ್ರಸಾದ್ ಅವರನ್ನು ವರಿಸಿದ ದಾಸ್ ವಿವಾಹಕ್ಕೂ ಒಂದು ದಿನ ಮೊದಲು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ.
ಬುಧವಾರ ಅವರಿಬ್ಬರು ದೇವಘರ್ನಲ್ಲಿರುವ ಬಾಬಾ ಮಂದಿರದಲ್ಲಿ ಸಪ್ತಪದಿ ತುಳಿದಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರ ಬಂಧುಗಳು ಸಹ ಹಾಜರಿದ್ದರು.
ಇಬ್ಬರು ಪ್ರತಿಷ್ಠಿತರಾಗಿದ್ದರೂ ಸರಳವಾಗಿ ವಿವಾಹವಾಗಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.
Comments are closed.