ಕರ್ನಾಟಕ

ಹೊಸಬರೊಂದಿಗೆ ‘ಕಿರಿಕ್ ಪಾರ್ಟಿ’ಯಲ್ಲಿ ಬ್ಯುಸಿಯಾಗಿರುವ ರಕ್ಷಿತ್ ಶೆಟ್ಟಿ

Pinterest LinkedIn Tumblr

rakshith shetty

ಬೆಂಗಳೂರು: 2012 ರಲ್ಲಿ ‘ತುಘಲಕ್’ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ರಕ್ಷಿತ್ ಶೆಟ್ಟಿ ತಮ್ಮದೇ ಛಾಪು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಇತ್ತೀಚಿನ ಚಿತ್ರ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ನಟನ ಯಶಸ್ಸನ್ನು ಇನ್ನಷ್ಟು ಹೆಚ್ಚಿಸಿದೆ.

ಈಗ ಅವರ ಮುಂದಿನ ಚಿತ್ರ ‘ಕಿರಿಕ್ ಪಾರ್ಟಿ’ಗೆ ತಯಾರಿ ನಡೆಸಿರುವ ನಟ ತಮ್ಮ ಹಿಂದಿನ ನಿನೆಮಾದ ಸಾಫ್ಟವೇರ್ ಎಂಜಿನಿಯರ್ ಪಾತ್ರದಿಂದ ಕಾಲೇಜು ಹುಡುಗನ ಪಾತ್ರಕ್ಕೆ ಜಿಗಿಯಲಿದ್ದಾರೆ. ಅದಕ್ಕಾಗಿ ತಮ್ಮ ನೋಟದ ಶೈಲಿಯನ್ನು ಬದಲಿಸಿಕೊಂಡಿದ್ದಾರೆ.

ರಿಷಬ್ ಶೆಟ್ಟಿ ನಿರ್ದೇಶನದ ಈ ಚಿತ್ರದ ಕೆಲವು ಭಾಗಗಳ ಚಿತ್ರೀಕರಣ ಹಾಸನದಲ್ಲಿ ಮುಗಿದಿದ್ದು ಒಂದು ತಿಂಗಳ ವಿರಾಮ ತೆಗೆದುಕೊಂಡಿದೆ ಚಿತ್ರತಂಡ. ಯುವಕರ ಜೊತೆ ಚಿತ್ರೀಕರಣ ನಡೆಸುತ್ತಿದ್ದು ನಾನು ಚಿಕ್ಕವನಾಗಿದ್ದೇನೆ ಎಂದು ಹಾಸ್ಯ ಚಟಾಕಿ ಹಾರಿಸುವ ರಕ್ಷಿತ್ “ಈ ಸಿನೆಮಾ ಹಾಸ್ಯ ಚಿತ್ರ. ಚಿತ್ರೀಕರಣದ ವೇಳೆ ಬಹಳ ಮಜವಾಗಿತ್ತು” ಎನ್ನುತ್ತಾರೆ.

ರಶ್ಮಿಕಾ ಮಂದಣ್ಣ ಮತ್ತು ಸಂಯುಕ್ತಾ ಹೆಗಡೆ ಇಬ್ಬರು ಹೊಸ ನಾಯಕ ನಟಿಯರು ಸಿನೆಮಾದಲ್ಲಿದ್ದು, ಇನ್ನಿತರ 20 ಹೊಸಬರು ಕೂಡ ಕಾಣಿಸಿಕೊಳ್ಳಲಿದ್ದಾರಂತೆ. ಈ ಮಧ್ಯೆ ರಕ್ಷಿತ್ ಶೆಟ್ಟಿ ಹೊಸ ಸ್ಕ್ರಿಪ್ಟ್ ಬರೆಯುವುದರಲ್ಲಿ ಕೂಡ ಬ್ಯುಸಿಯಾಗಿದ್ದಾರೆ.

Comments are closed.