ಯಲಹಂಕ, ಜೂ. ೨೨- 2017ರ ಮಾರ್ಚ್ ಅಂತ್ಯಕ್ಕೆ 6 ಕಡೆಗಳಲ್ಲಿ ಬಿಎಂಟಿಸಿ ಬಸ್ ಡಿಪೋಗಳನ್ನು ಆರಂಭಿಸಲಾಗುವುದೆಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಇಂದು ಇಲ್ಲಿ ತಿಳಿಸಿದ್ದಾರೆ.
ಬೆಂಗಳೂರು ಉತ್ತರ ತಾಲ್ಲೂಕಿನ ಸಾದೇನಹಳ್ಳಿಯಲ್ಲಿ 431 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ನಿರ್ಮಾಣವಾಗಿರುವ ನೂತನ ಬಸ್ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.
ಈ ವರ್ಷದ ಬಜೆಟ್ನಲ್ಲಿ 120 ಕೋಟಿ ಹಣವನ್ನು ಬಿಎಂಟಿಸಿಗೆಂದು ಮೀಸಲಿಟ್ಟಿದ್ದು, ಈಗಾಗಲೇ 10 ಕೋಟಿ ರೂ. ಬಳಕೆಯಾಗಿದ್ದು, ಮುಂದಿನ ದಿನಗಳಲ್ಲಿ ಸರ್ಕಾರ ಒಂದು ಸಾವಿರ ಬಸ್ಗಳನ್ನು ಖರೀದಿಸಲಿದೆ ಎಂದು ಹೇಳಿದರು.
ಶೀಘ್ರದಲ್ಲೇ 658 ಬಸ್ಗಳನ್ನು ಬಿಎಂಟಿಸಿಗೆ ಸೇರ್ಪಡೆ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು. ಅಲ್ಲದೆ, 6400 ಬಿಎಂಟಿಸಿ ನೌಕರರಿಗೆ ಗೃಹ ನಿರ್ಮಾಣ ಮಾಡಲು ಯೋಜನೆಯನ್ನು ರೂಪಿಸಲಾಗಿದ್ದು, ಗೃಹ ನಿರ್ಮಾಣಕ್ಕೆ ಜಾಗಗಳನ್ನು ನಿಯೋಜನೆ ಮಾಡಲು ಸಿದ್ಧತೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಸಂಸತ್ ಸದಸ್ಯ ವೀರಪ್ಪ ಮೊಯ್ಲಿ ಈ ಸಂದರ್ಭದಲ್ಲಿ ಮಾತನಾಡಿದರು.
ಈ ಯೋಜನೆಯಿಂದ ಅನಗತ್ಯ ಹಣ, ಸಮಯ ವ್ಯರ್ಥವಾಗುವುದನ್ನು ತಪ್ಪಿಸಬಹುದಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ಎಸ್.ಆರ್. ವಿಶ್ವನಾಥ್, ಬಿಎಂಟಿಸಿ ಅಧ್ಯಕ್ಷ ನಾದಿರಾಜ ಜೈನ್, ಉಪಾಧ್ಯಕ್ಷ ವಿ.ಎಸ್. ಆರಾಧ್ಯ, ರಾಜಾನುಕುಂಟೆ ಗ್ರಾ.ಪಂ. ಅಧ್ಯಕ್ಷೆ ಸವಿತಾ ವೀರಣ್ಣ, ತಾ.ಪಂ. ಸದಸ್ಯರಾದ ಲಾವಣ್ಯ ನರಸಿಂಹಮೂರ್ತಿ, ಚೊಕ್ಕನಹಳ್ಳಿ ವೆಂಕಟೇಶ್, ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ಸೇರಿದಂತೆ, ಇನ್ನಿತರರಿದ್ದರು.
ಕರ್ನಾಟಕ
Comments are closed.