ಕರ್ನಾಟಕ

ಅಂಬಿ ಬಿಟ್ಟರೆ ಕೆಟ್ಟಿರಿ… ಸಿದ್ದುಗೆ ಎಚ್ಚರಿಕೆ

Pinterest LinkedIn Tumblr

siddaramaiahclr-297x400ಬೆಂಗಳೂರು, ಜೂ. ೨೧- ಅಂಬರೀಷ್ ಅವರನ್ನು ಮರಳಿ ಸಂಪುಟಕ್ಕೆ ಸೇರಿಸಿಕೊಳ್ಳಿ ಇಲ್ಲದಿದ್ದರೆ ಮುಂದಿನ ಅನಾಹುತಗಳಿಗೆ ಮುಖ್ಯಮಂತ್ರಿಯಾಗಿ ನೀವೇ ಜವಾಬ್ದಾರರಾಗುತ್ತೀರಿ ಎಂದು ಮಂಡ್ಯದಿಂದ ಬಂದಿದ್ದ ಕಾಂಗ್ರೆಸ್ ಪಕ್ಷದ ಅನೇಕ ಮುಖಂಡರು, ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಇಂದಿಲ್ಲಿ ಆಗ್ರಹಿಸಿದರು.

ಅಂಬರೀಷ್ ಅವರು ಅಸಮರ್ಥರಲ್ಲ, ಅವರು ಸಮರ್ಥರು, ಜಿಲ್ಲೆಯಲ್ಲಿ ಅದೊಂದು ದೊಡ್ಡ ಶಕ್ತಿ, ಆ ಶಕ್ತಿಯನ್ನು ಯಾವುದೇ ಕಾರಣಕ್ಕೂ ಕಳೆದುಕೊಳ್ಳಬೇಡಿ. ಹಾಗೊಂದು ವೇಳೆ ಕಳೆದುಕೊಂಡರೆ ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಉಳಿಗಾಲವಿಲ್ಲ ಎಂದು ನೂರಾರು ಕಾಂಗ್ರೆಸ್ ಮುಖಂಡರು ಹಾಗೂ ಬೆಂಬಲಿಗರು ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದರು.

ಅಂಬರೀಷ್ ಅವರ ಜೆಪಿನಗರದ ನಿವಾಸದ ಮುಂದೆ ಮರಳಿ ಸಂಪುಟಕ್ಕೆ ಸೇರಿಸಿಕೊಳ್ಳಬೇಕು. ಇಲ್ಲದಿದ್ದರೆ ಮಂಡ್ಯದಲ್ಲಿ ಅನಾಹುತಗಳ ಸರಮಾಲೆಯೇ ನಡೆಯಲಿದೆ. ಇದಕ್ಕೆ ನೀವು ಕಾರಣರಾಗಬೇಡಿ ಎಂದು ಕಾರ್ಯಕರ್ತರು ಆಕ್ರೋಶಭರಿತವಾಗಿ ಮಾತನಾಡಿದರು.

ಅಂಬರೀಷ್ ಅವರ ಹೆಸರಿನಿಂದ ಸಾವಿರಾರು ಕುಟುಂಬಗಳು ಇಂದಿಗೂ ಜೀವನ ನಡೆಸುತ್ತಿವೆ. ಅದನ್ನು ಮೊದಲು ಅರ್ಥ ಮಾಡಿಕೊಳ್ಳಿ. ಮೊದಲು ಸಂಪುಟಕ್ಕೆ ತೆಗೆದುಕೊಳ್ಳಿ ಎಂದು ಆಗ್ರಹಿಸಿದರು.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಕೂಡ ಈ ನಿಟ್ಟಿನಲ್ಲಿ ಚರ್ಚಿಸಿ ಅಂಬರೀಷ್ ಅವರನ್ನು ಮರಳಿ ಸಂಪುಟಕ್ಕೆ ಸೇರಿಸಿಕೊಳ್ಳಬೇಕು. ಇಲ್ಲದಿದ್ದರೆ ಮಂಡ್ಯ ಸೇರಿದಂತೆ ರಾಜ್ಯದಲ್ಲಿ ನಡೆಯುವ ಅನಾಹುತಗಳಿಗೆ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

Comments are closed.