ಮಂಗಳೂರು, ಜೂನ್ 20 : ಪಡೀಲ್-ಬಜಾಲ್ ರೈಲ್ವೆ ಕೆಲ ಸೇತುವೆ ಕಾಮಗಾರಿಯ ನಿರ್ಲಕ್ಷ್ಯದಿಂದಾಗಿ ಇಲ್ಲಿ ಶೇಖರಣೆಗೊಳ್ಳುವ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಕಾಣದೇ, ಕೆಸರು ನೀರಿನಲ್ಲಿಯೇ ವಾಹನಗಳು ಸಂಚಾರ ನಡೆಸಬೇಕಾಗಿದೆ. ಬಸ್ಸು, ಲಾರಿಗಳಂತಹ ಘನವಾಹನಗಳ ಚಕ್ರಗಳು ಮುಳುಗುವಷ್ಟು ನೀರು ಕೆಳ ಸೇತುವೆಯಲ್ಲಿ ಸಂಗ್ರಹವಾಗುತ್ತಿದೆ. ಇದರಿಂದಾಗಿ ದ್ವಿಚಕ್ರ ವಾಹನಗಳು, ಕಾರು, ಲಘು ವಾಹನಗಳು ಈ ಅಂಡರ್‌ಪಾಸ್‌ನಲ್ಲಿ ಸಂಚರಿಸಲು ಸಾಧ್ಯವಾಗುತ್ತಿಲ್ಲ.
ಬಜಲ್, ಜಲ್ಲಿಗುಡ್ಡೆ, ವೀರನಗರ, ಕರ್ಮಾರ್ ಪ್ರದೇಶಗಳ ಸಾವಿರಾರು ಜನರು ನಗರದ ಕಡೆಗೆ ಸಂಚರಿಸಲು ಈ ರಸ್ತೆಯನ್ನು ಅವಲಂಭಿಸಿದ್ದಾರೆ. ಈ ರಸ್ತೆಯಲ್ಲಿ 13 ಬಸ್ಸುಗಳು ಸಂಚರಿಸುತ್ತಿದ್ದು, ಪ್ರತಿ 5ನಿಮಿಷಕ್ಕೊಂದು ಬಸ್ ಓಡಾಡುತ್ತವೆ. ಆದರೆ, ಅಂಡರ್‌ಪಾಸ್‌ನಲ್ಲಿ ನೀರು ತುಂಬಿಕೊಳ್ಳುವುದರಿಂದ ಎಲ್ಲಾ ವಾಹನಗಳು ಬಜಾಲ್-ಎಕ್ಕೂರ್ ಮಾರ್ಗವಾಗಿ ಅಥವಾ ವೀರ ನಗರ-ಕಣ್ಣೂರು ರಸ್ತೆ ಮೂಲಕ ಸುತ್ತು ಹಾಕಿಕೊಂಡು ನಗರ ಪ್ರವೇಶಿಸುವುದು ಅನಿವಾರ್ಯ ವಾಗಿದೆ.
ಅಮೆಗತಿಯ ಕಾಮಗಾರಿ :
ಪಡೀಲ್-ಬಜಾಲ್ ರೈಲ್ವೇ ಕೆಳ ಸೇತುವೆಯು ಸ್ಥಳೀಯ ಜನರ ಬಹುಕಾಲದ ಬೇಡಿಕೆಯಾಗಿತ್ತು. ಕೇಂದ್ರ ರೈಲ್ವೆ ಸಚಿವರಾಗಿದ್ದ ಡಿ.ವಿ.ಸದಾನಂದ ಗೌಡರು 2014ರ ಆಗಸ್ಟ್‌ನಲ್ಲಿ ಈ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿದ್ದರು. 5.61 ಕೋಟಿ ರೂ. ವೆಚ್ಚದಲ್ಲಿ ಆರಂಭವಾದ ಈ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. 2014ರ ಡಿಸೆಂಬರ್‌ನಲ್ಲಿ ಇಲ್ಲಿ ಕಾಮಗಾರಿ ಸ್ಥಳದಲ್ಲಿ ಮಣ್ಣು ಕುಸಿದು ಕಾರ್ಮಿಕನೊಬ್ಬ ಮೃತಪಟ್ಟಿದ್ದು,ಆದರೂ ಕಾಮಗಾರಿ ಮಾತ್ರ ಮಎಗತಿಯಲ್ಲಿ ಸಾಗುತ್ತಿದೆ.

Comments are closed.