ಕರ್ನಾಟಕ

ದ್ವಿತೀಯ ಪಿಯುಸಿ ಮರು ಮೌಲ್ಯಮಾಪನ : ವಿಜ್ಞಾನ ವಿಭಾಗದ ಟಾಪರ್ ಮೈಸೂರಿನ ರವೀಶ್

Pinterest LinkedIn Tumblr

puc_toper_ravish

ಮೈಸೂರು, ಜೂ.17: ಪದವಿ ಪೂರ್ವ ಪರೀಕ್ಷೆ ಫಲಿತಾಂಶದ ಮರು ಮೌಲ್ಯಮಾಪನದಲ್ಲಿ ಮೈಸೂರಿನ ರಾಮಕೃಷ್ಣ ಆಶ್ರಮದ ವಿದ್ಯಾರ್ಥಿ ರವೀಶ್ ಸುರೇಶ್ ಬನ್ನಿಹಟ್ಟಿ ರಾಜ್ಯಕ್ಕೆ ಮೊದಲಿಗರಾಗಿ ಹೊರಹೊಮ್ಮಿದ್ದಾರೆ.

ಈತ ಒಟ್ಟು ವಿಜ್ಞಾನ ವಿಭಾಗದಲ್ಲಿ 600 ಅಂಕಗಳಿಗೆ 597 ಅಂಕ ಪಡೆದಿದ್ದಾನೆ. ಈ ಮೊದಲು ವಿಜ್ಞಾನ ವಿಭಾಗದಲ್ಲಿ ಬೆಂಗಳೂರಿನ ರಕ್ಷಿತಾ ತಮನ್ 596 ಅಂಕ ಪಡೆದು ರಾಜ್ಯದ ಟಾಪರ್ ಆಗಿದ್ದರು. ಮೊದಲು ರವೀಶ್’ಗೆ 600ಕ್ಕೆ 589 ಅಂಕ ಬಂದಿತ್ತು. ಹೀಗಾಗಿ ರವೀಶ್ ಮರು ಮೌಲ್ಯಮಾಪನಕ್ಕೆ ಅರ್ಜಿ ಹಾಕಿದ್ದರು. ಇದೀಗ ಮರು ಮೌಲ್ಯಮಾಪನದಲ್ಲಿ ರವೀಶ್’ಗೆ ಅಧಿಕ ಅಂಕ ಬಂದಿದೆ.
ಈತ ಸಂಸ್ಕೃತದಲ್ಲಿ 100, ಜೀವ ಶಾಸ್ತ್ರದಲ್ಲಿ 100, ಗಣಿತದಲ್ಲಿ 100, ಭೌತ ಶಾಸ್ತ್ರದಲ್ಲಿ 100 ಅಂಕ ಪಡೆದರೆ, ರಸಾಯನಶಾಸ್ತ್ರದಲ್ಲಿ 99 ಹಾಗೂ ಇಂಗ್ಲೀಷ್ನಲ್ಲಿ 98 ಅಂಕ ಪಡೆದಿದ್ದಾನೆ.

Comments are closed.