ರಾಷ್ಟ್ರೀಯ

ಮೋದಿಯಿಂದ ಒಂದು ಕಪ್ ಟೀ ತಂದವರಿಗೆ… ಅವರೊಂದಿಗೆ ಪದವಿ ವಿದ್ಯಾಭ್ಯಾಸ ಮಾಡಿದವರಿದ್ದರೇ ಅಂತವರಿಗೆ 2 ಲಕ್ಷ ರು. ಬಹುಮಾನ: ದಿಗ್ವಿಜಯ್ ಸಿಂಗ್

Pinterest LinkedIn Tumblr

Digvijaya-Modi

ಅರ್ನಿ( ಮಹಾರಾಷ್ಟ್ರ):ಪ್ರಧಾನಿ ನರೇಂದ್ರ ಮೋದಿ ಅವರ ಕೈಯ್ಯಿಂದ ಒಂದು ಕಪ್ ಟೀ ತಂದರೇ ಅಂತವರಿಗೆ ತಾವು 2 ಲಕ್ಷ ರು ಬಹುಮಾನ ನೀಡುವುದಾಗಿ ಕಾಂಗ್ರೆಸ್ ಹಿರಿಯ ಮುಖಂಡ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ನಡೆದ ರೈತರ ರ್ಯಾಲಿಯಲ್ಲಿ ಏರ್ಪಡಿಸಿದ್ದ ‘ಚಾಯ್ ಕಿ ಚರ್ಚಾ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿ ಕೈಯ್ಯಿಂದ ಒಂದು ಕಪ್ ಟೀ ಅಥವಾ ಅವರ ಜೊತೆ ಪದವಿ ವಿದ್ಯಾಭ್ಯಾಸ ಮಾಡಿದವರು ಯಾರಾದರೂ ಇದ್ದರೇ ಅಂತವರಿಗೆ ತಾವು 2 ಲಕ್ಷ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.

ಒಮ್ಮೆ ತಾವು ಎಸ್ ಎಸ್ ಎಲ್ ಸಿ ವಿದ್ಯಾಭ್ಯಾಸ ಮಾಡಿರುವುದಾಗಿ ಒಪ್ಪಿಕೊಂಡಿದ್ದ ಮೋದಿ ಈಗ ಪದವಿ ಪಡೆದಿರುವುದಾಗಿ ಸುಳ್ಳು ಹೇಳುತ್ತಿದ್ದಾರೆ ಎಂದು ದಿಗ್ವಿಜಯ್ ಸಿಂಗ್ ಆರೋಪಿಸಿದ್ದಾರೆ.

Comments are closed.