
ಚಂಡೀಗಢ: ಮಾದಕ ವ್ಯಸನಿ ಪತಿಯಿಂದ ಇರಿತಕ್ಕೊಳಗಾದ ಪತ್ನಿಯ ಬೆನ್ನಿನ ಮೇಲಿಂದ ಚಾಕುವನ್ನ ವೈದ್ಯರು ಬರೋಬ್ಬರಿ 32 ಗಂಟೆಗಳ ಬಳಿಕ ತೆಗೆದ ಘಟನೆ ಚಂಡೀಘಡದಲ್ಲಿ ನಡೆದಿದೆ.
ಹೌದು. 30 ವರ್ಷದ ಮಹಿಳೆಯೊಬ್ಬರು ಪತಿಯಿಂದ ಇರಿತಕ್ಕೊಳಗಾಗಿ ಕೊನೆಗೂ ಬದುಕುಳಿದಿದ್ದಾರೆ. ಗಂಡ ಮಾದಕ ವ್ಯಸನಿ ಎಂಬ ಕಾರಣಕ್ಕೆ ಕಾರ್ಪುತಲದಲ್ಲಿರುವ ತವರು ಮನೆಗೆ ಹೋಗಿದ್ದರು. ಇತ್ತ ಪತ್ನಿಯನ್ನ ಭೇಟಿ ಮಾಡಲು ಬಂದಿದ್ದ ಪತಿ ನಶೆಯಲ್ಲಿ ಆಕೆಯೊಂದಿಗೆ ವಾಗ್ವಾದಕ್ಕಿಳಿದು ಬೆನ್ನಿಗೆ ಚಾಕು ಇರಿದು ಪರಾರಿಯಾಗಿದ್ದನು.
ಇರಿತಕ್ಕೊಳಗಾಗಿದ್ದ ಮಹಿಳೆಯನ್ನ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಾಯಿಸತಾದರೂ ಆಕೆಯ ಸ್ಥಿತಿ ತೀವ್ರ ಚಿಂತಾಜನಕವಾಗಿದ್ದ ಕಾರಣ ಚಂಡೀಗಢಕ್ಕೆ ತೆರಳುವಂತೆ ಸೂಚಿಸಿದ್ದರು. ಹೀಗಾಗಿ ಆ ಮಹಿಳೆ ಚಾಕು ಸಮೇತ 450 ಕಿಮೀ. ಪ್ರಯಾಣ ಮಾಡಿದ್ದಾರೆ. ಕೊನೆಗೂ ಆಸ್ಪತ್ರೆಯಲ್ಲಿ ವೈದ್ಯರು ಚಾಕುವನ್ನ ಹೊರ ತೆಗೆದು ಆಕೆಯನ್ನು ರಕ್ಷಿಸಿದ್ದಾರೆ.
Comments are closed.