ಅಂತರಾಷ್ಟ್ರೀಯ

ಶಿಕ್ಷಕನಾಗಬೇಕೆಂಬ ಆಸೆ ಪೂರೈಕೆಗೆ 68 ನೇ ವಯಸ್ಸಿಗೆ ಶಾಲೆ ಸೇರಿದ ವೃದ್ಧ !

Pinterest LinkedIn Tumblr

1

ಕಠ್ಮಂಡು: ನೇಪಾಳದ 68 ರ ವಯಸ್ಸಿನ ವೃದ್ಧನೊಬ್ಬ ಶಾಲೆಯ ಸಮವಸ್ತ್ರ ಧರಿಸಿ ಬ್ಯಾಗು ಹಿಡಿದು ಬಾಲಕರಂತೆ ಶಾಲೆಗೆ ಹೊರಟಿದ್ದಾನೆ. ಬಡತನದಿಂದ ತನ್ನ ಬಾಲ್ಯಾವಸ್ಥೆಯಲ್ಲಿ ಓದಲು ಸಾಧ್ಯವಾಗದೆ ಶಿಕ್ಷಿತನಾಗಿ ತಾನೊಬ್ಬ ಶಿಕ್ಷಕನಾಗಬೇಕೆಂಬ ಆಸೆ ಪೂರೈಕೆಗೆ ಮುಂದಾಗಿದ್ದಾನೆ.

4

3

2

7

6

5

ದುರ್ಗಾ ಕಾಮಿ ಎಂಬ ವೃದ್ಧ ಇಂತಹ ಸಾಧನೆಗೆ ಮುಂದಾಗಿದ್ದಾನೆ. 6 ಜನ ಮಕ್ಕಳು ಮತ್ತು 8 ಜನ ಮೊಮ್ಮಕ್ಕಳನ್ನು ಹೊಂದಿರುವ ಕಾಮಿ ತನ್ನ ಹೆಂಡತಿ ಮರಣದ ನಂತರ ಖಿನ್ನತೆಯಿಂದ ಬಳಲುತ್ತಿದ್ದ ಕಾಮಿ ತನ್ನ ಆಸೆ ಪೂರೈಕೆಗೆ ಮುಂದಾಗಿದ್ದಾನೆ.

200 ಜನ ಮಕ್ಕಳನ್ನು ಹೊಂದಿರುವ ಕಾಲಭೈರವ ಶಾಲೆಗೆ ಮಕ್ಕಳಂತೆ ತಾನೂ ಕೂಡ ದಿನವೂ ಶಾಲೆಗೆ ತೆರಳುತ್ತಾನೆ. ನೇಪಾಳದ ಶಾಂಗಜಾ ಜಿಲ್ಲೆಯವನಾದ ಕಾಮಿ ಶಾಲೆಗೆ ತೆರಳಿ ನನ್ನ ದುಃಖ ಮರೆಯಲು ಯತ್ನಿಸುತ್ತೇನೆ ಎನ್ನುತ್ತಾರೆ. ಸಾಮಾನ್ಯ ಬಾಲಕರಂತೆ ಈ ವೃದ್ದನಿಗೆ ಶಿಕ್ಷಣಕ್ಕೆ ಅವಕಾಶ ನೀಡಿದ ಶಾಲೆ ಶಿಕ್ಷಕರು ಕೂಡ ಈತನ ಕಲಿಕೆಯ ಉತ್ಸಾಹಕ್ಕೆ ಪ್ರೋತ್ಸಾಹ ನೀಡಿದ್ದಾರೆ.

ತನ್ನ ಉಸಿರಿರುವವರೆಗೂ ಓದುವ ನಿರ್ಧಾರ ಮಾಡಿರುವುದಾಗಿ ತಿಳಿಸಿದ ದುರ್ಗಾ ಕಾಮಿ ತನ್ನಂತಹ ವೃದ್ಧನೊಬ್ಬ ಶಾಲೆಗೆ ಬರುವುದರಿಂದ ಮಕ್ಕಳ ಕಲಿಕೆಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾನೆ.

Comments are closed.