ರಾಷ್ಟ್ರೀಯ

ತಿರುಪತಿ ತಿರುಮಲಕ್ಕೆ ಅರ್ಪಿಸುವ ತಲೆಕೂದಲು ಹರಾಜಿನಿಂದ ದೇಗುಲಕ್ಕೆ 5.71 ಕೋಟಿ ಆದಾಯ!

Pinterest LinkedIn Tumblr

tiru

ತಿರುಪತಿ‌: ವಿಶ್ವದಲ್ಲೇ ಅತೀ ಹೆಚ್ಚು ಆದಾಯ ಗಳಿಸುವ ಶ್ರೀಮಂತ ದೇಗುಲ ತಿರುಪತಿ ತಿರುಮಲ ದೇವಾಲಯ ಮತ್ತೊಂದು ದಾಖಲೆ ಬರೆದಿದ್ದು, ತಲೆಕೂದಲು ಹರಾಜಿನಿಂದ ಬರುವ ಆದಾಯ ಈ ಬಾರಿ ದಾಖಲೆ ಬರೆದಿದೆ.

ಮೂಲಗಳ ಪ್ರಕಾರ ತಿರುಮಲ ತಿರುಪತಿ ದೇವಸ್ಥಾನ ಏಪ್ರಿಲ್‌ತಿಂಗಳಲ್ಲಿ ಕೂದಲು ಮಾರಾಟದಿಂದ ರು.5.71 ಕೋಟಿ ಆದಾಯ ಗಳಿಸಿದ್ದು, ಇದು ಕೂದಲು ಮಾರಾಟದಿಂದ ಬಂದ ಏಪ್ರಿಲ್ ತಿಂಗಳ ಗರಿಷ್ಠ ಆದಾಯ ಗಳಿಕೆಯಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ. ಮಂಗಳವಾರ ದೇಗುಲದ ಮಂಡಳಿ ಸಭೆಯಲ್ಲಿ ಮಾತನಾಡಿದ ಟಿಟಿಡಿ ಅಧ್ಯಕ್ಷ ಡಾ. ಚದಲವಾಡ ಕೃಷ್ಣಮೂರ್ತಿ ಅವರು, ಕೂದಲು ಮಾರಾಟದಿಂದ ಬಂದ ಏಪ್ರಿಲ್ ತಿಂಗಳ ಗರಿಷ್ಠ ಆದಾಯ ಇದಾಗಿದೆ ಎಂದು ತಿಳಿಸಿದರು.

ಅಂತೆಯೇ ದೇಗುಲದ ಒಟ್ಟಾರೆ ಆದಾಯದಲ್ಲಿ ತಿರುಪತಿಯ ಬಿಐಆರ್‌ಆರ್‌ಡಿ ಆಸ್ಪತ್ರೆಯಲ್ಲಿ ರು.4.22 ಕೋಟಿ ವೆಚ್ಚದಲ್ಲಿ ಆರು ಶಸ್ತ್ರಚಿಕಿತ್ಸೆ ಘಟಕಗಳನ್ನು ನಿರ್ಮಿಸಲು ಮಂಡಳಿ ಒಪ್ಪಿಗೆ ಸೂಚಿಸಿತು. ಇನ್ನು ಅಲಿಪಿರಿ ಸಮೀಪ ರು14.5 ಕೋಟಿ ವೆಚ್ಚದಲ್ಲಿ ಸ್ಟುಡಿಯೋ ಮತ್ತು ಕಚೇರಿ ಹಾಗೂ ಪ್ರಕಾಶಂ ಜಿಲ್ಲೆಯ ಕೊಂಡಪಿಯಲ್ಲಿ ರು.1.25 ಕೋಟಿ ವೆಚ್ಚದಲ್ಲಿ ಕಲ್ಯಾಣ ಮಂಟಪ ನಿರ್ಮಿಸಲು ಮಂಡಳಿ ನಿರ್ಧರಿಸಿದೆ ಎಂದು ಅವರು ತಿಳಿಸಿದರು.

Comments are closed.