
ಪ್ರತಿಯೊಬ್ಬರ ಹೃದಯದಲ್ಲಿ ರಕ್ತನಾಳ ಇರುತ್ತದೆ. ದೊಡ್ಡ ರಕ್ತನಾಳದಿಂದಲೇ ನಮ್ಮ ಇಡಿ ಶರೀರಕ್ಕೆ ರಕ್ತ ಪೂರೈಕೆಯಾಗುತ್ತದೆ. ಹೀಗೆ ಶರೀರಕ್ಕೆ ರಕ್ತ ಪೂರೈಕೆ ಮಾಡುವ ನಾಳವನ್ನು ಆಯೋರ್ಟಾ ಟ್ಯೂಬ್ ಎಂದು ಕರೆಯಲಾಗುತ್ತದೆ.
ಕೆಲವರಲ್ಲಿ ಈ ಟ್ಯೂಬ್ ಬಿರುಕು ಬಿಟ್ಟು ಹೊಡೆದು ಹೋದರೆ ಅದನ್ನು ವೈದ್ಯಕೀಯ ಭಾಷೆಯಲ್ಲಿ ಆಯೋರ್ಟಿಕ್ ಡಿಸಕ್ಷನ್ ಎನ್ನಲಾಗುತ್ತದೆ.
ಸಾಮಾನ್ಯವಾಗಿ ಆಯೋರ್ಟಾ ಟ್ಯೂಬ್ ಒಡೆದು ಹೋದಾಗ ಆ ವ್ಯಕ್ತಿಗೆ ಹಾರ್ಟ್ ಅಟ್ಯಾಕ್ ಆಗಿರಬಹುದು ಎಂದೇ ಭಾವಿಸಲಾಗುತ್ತದೆ.
ಹಾರ್ಟ್ ಅಟ್ಯಾಕ್ ಆಗುವಾಗ ಸಂಭವಿಸಬಹುದಾದ ಎದೆನೋವು, ಆಘಾತಕಾರಿ ಬೆನ್ನುನೋವುಗಳಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಆದರೆ ವಾಸ್ತವವಾಗಿ ಇದು ಹಾರ್ಟ್ ಅಟ್ಯಾಕ್ ಆಗಿರುವುದಿಲ್ಲ ಎಂದು ಜೈನ್ ಆಸ್ಪತ್ರೆಯ ವೈದ್ಯರಾದ ಡಾ. ಮುರುಳಿ ಕೃಷ್ಣ ಹೇಳುತ್ತಾರೆ.
ಇಂತಹ ರೋಗದ ಚಿಹ್ನೆ ಇರುವ ರೋಗಿಯೊಬ್ಬರಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಯಶಸ್ಸಾದ ನಂತರ ರೋಗ ಲಕ್ಷಣದ ಬಗ್ಗೆ ವಿವರಿಸಿದ್ದಾರೆ.
72 ವರ್ಷ ವಯಸ್ಸಿನ ರಾಮ್ಸಿಂಗ್ ಮಗನ ಮನೆಯಲ್ಲಿ ಕುಸಿದುಬಿದ್ದರು. ಕುಟುಂಬದವರು ಜೈನ್ ಆಸ್ಪತ್ರೆಗೆ ಕರೆ ತಂದಾಗ ಅವರು ಪ್ರಜ್ಞಾಹೀನರಾಗಿದ್ದರು. ರಕ್ತದೊತ್ತಡವು ಕಡಿಮೆ ಇತ್ತು. ಏಕೋ ಕಾರ್ಡಿಯೋಗ್ರಾಫ್ ಮಾಡಿದಾಗ ಆಯೋರ್ಟಿಕ್ ಡಿಸಕ್ಷನ್ ಇರುವುದು ಪತ್ತೆಯಾಯಿತು. ಬದುಕುಳಿಯುವುದೇ ಕಷ್ಟ ಎನ್ನುವ ಪರಿಸ್ಥಿತಿಯಲ್ಲೂ ವೈದ್ಯರು ಶಸ್ತ್ರಚಿಕಿತ್ಸೆ ನಿರ್ಧಾರ ಕೈಗೊಂಡು ದೊಡ್ಡ ಪವಾಡ ಸೃಷ್ಟಿಸಿದರು.
ಆಯೋರ್ಟಿಕ್ ಹಾರ್ಟ್ ಸರ್ಜರಿಯನ್ನು ಯಶಸ್ವಿಯಾಗಿ ಮಾಡುವ ಮೂಲಕ ರೋಗಿಯ ಬಾಳಲ್ಲಿ ಹೊಸ ಬೆಳಕು ಮೂಡಿಸಿದ್ದಾರೆ.
ಈ ರೋಗ ಪತ್ತೆ ವಿಧಾನದಲ್ಲಿ ಆಯೋರ್ಟಾ ಟ್ಯೂಬ್ ಬಿರುಕು ಬಿಟ್ಟಾಗ ಎಲ್ಲಿಯವರೆಗೆ ಬಿರುಕು ಬಿಟ್ಟಿದೆ ಎಂಬುದನ್ನು ಮೊದಲೇ ಪತ್ತೆಹಚ್ಚಬೇಕು. ಕೆಲವರಿಗೆ ಅರ್ಧದವರೆಗೆ ಟ್ಯೂಬ್ ಬಿರುಕು ಬಿಟ್ಟಿರುತ್ತದೆ. ಇನ್ನು ಕೆಲವರಿಗೆ ಕಾಲಿನ ರಕ್ತನಾಳದವರೆಗೆ ಬಿರುಕು ಬಿಟ್ಟಿರುತ್ತದೆ ಎಂದು ರೋಗದ ಲಕ್ಷಣಗಳ ಬಗ್ಗೆ ವಿವರಿಸುತ್ತಾರೆ.
ಲ್ಯುಮೆನ್, ಪಾಲ್ಸ್ ಲ್ಯುಮೆನ್ ಎಂಬ ಎರಡು ವಿಧಾನಗಳಿವೆ. ನಿಜವಾದ ಲ್ಯುಮೆನ್ನಿಂದ ಮಾತ್ರ ಶರೀರದ ಎಲ್ಲ ಅಂಗಗಳಿಗೆ ರಕ್ತ ಪೂರೈಕೆಯಾಗಬೇಕು. ಟ್ಯೂಬ್ ಬಿರುಕು ಬಿಟ್ಟಾಗ ಎರಡು ಲ್ಯುಮೆನ್ ಫಾರ್ಮ್ ಆಗಿರುವುದರಿಂದ ಎರಡರಲ್ಲೂ ರಕ್ತ ಹರಿಯಲು ಶುರುವಾಗುತ್ತದೆ. ಹೀಗಾದಾಗ ಟ್ರೂ ಲ್ಯುಮನ್ ಅನ್ನು ಫಾಲ್ಸ್ ಲ್ಯೂಮನ್ ಅನ್ನು ಮುಚ್ಚಿಬಿಡುತ್ತದೆ ಎನ್ನುತ್ತಾರೆ.
ಈ ರೋಗಕ್ಕೆ ತುತ್ತಾದವರು ಮೊದಲಿನ ಸ್ಥಿತಿಗೆ ಬರುವ ಸಾಧ್ಯತೆ ತೀರಾ ಕಡಿಮೆ. ಕೆಲವರಿಗೆ ಫಾಲ್ಸ್ ಲ್ಯುಮೆನ್ನಿಂದ ಗ್ಯಾಂಗ್ರಿನ್ ಮತ್ತು ಸ್ಟ್ರೋಕ್ ಆಗಿ ಬಿಡುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. ಈ ರೋಗದಿಂದ ಬಳಲುತ್ತಿದ್ದ ರಾಮ್ಸಿಂಗ್ಗೆ 7 ಗಂಟೆಗಳ ಕಾಲ ಯಶಸ್ವಿ ಶಸ್ತ್ರಚಿಕಿತ್ಸೆಯನ್ನು ಜೈನ್ ಆಸ್ಪತ್ರೆ ವೈದ್ಯರು ನಡೆಸಿದ್ದಾರೆ.
Comments are closed.