ಮುಂಬೈ: ಬಾಲಿವೂಡ್ನ ಹಿರಿಯ ನಟ ಅನುಪಮ್ ಖೇರ್ ತಮ್ಮ 500ರ ಚಿತ್ರ ಯಾವುದು ಅಂತ ಹೇಳಿಕೊಂಡಿದ್ದಾರೆ. ಬಾಲಿವುಡ್ನ ಕೆರಿಯರ್ ಲೈಫ್ಲ್ಲಿ ಅನುಪಮ್ ಖೇರ್ ಹಾಲಿವುಡ್ನ ಬಿಗ್ ಸಿಕ್ ಎಂಬ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಆ ಚಿತ್ರ ಅನುಪಮ್ ಖೇರ್ ಅವರ 500ರ ಚಿತ್ರ ಆಗಲಿದೆ.
61 ವರ್ಷದ ಅನುಪಮ್ ಖೇರ್ 32 ವರ್ಷದ ಹಿಂದ್ ಬಾಲಿವುಡ್ ಜಗತ್ತಿಗೆ ಕಾಲಿಟ್ಟಿದ್ದರು. ಅಲ್ಲದೇ ಹಾಲಿವುಡ್ನ ಹಲವು ನಟರ ಅನುಪಮ್ ಖೇರ್ ಸ್ಕ್ರೀನ್ ಶೇರ್ ಮಾಡಿದ್ದಾರೆ,
ಅವರಲ್ಲಿ ಪ್ರಮುಖರು ಯಾರು ಅಂದ್ರೆ ಹಾಲಿ ಹಂಟರ್, ಜೋಯಿ ಖಾನ್, ರಾಯ್ ರೋಮೋನೋ, ಕುಮಾಲಿ ನನ್ನಜೀನಿ , ಅಡಿಯಾಳ ಅಕ್ತರ ಮೊದಲಾದವರ ಜತೆ ನಟಿಸಿದ್ದರು.
ಪಾಕಿಸ್ತಾನದಲ್ಲಿ ಹುಟ್ಟಿರುವ ವ್ಯಕ್ತಿ ಹಾಗೂ ಅಮೇರಿಕಾ ಮಹಿಳೆಯ ಕುರಿತಾಗಿದೆ ಈ ಚಿತ್ರ… . ಈ ಚಿತ್ರದಲ್ಲಿ ಖೇರ್ ಕುಮಾಲಿ ನಾನಜೀನ್ ತಂದೆಯ ಪಾತ್ರದಲ್ಲಿ ಮಿಂಚಲಿದ್ದಾರೆ.
ಈಚೆಗಷ್ಟೇ ಪದ್ಮ ವಿಭೂಷಣ ಪ್ರಶಸ್ತಿ ಪುರಸ್ಕೃತರಾಗಿರುವ ಬಾಲಿವುಡ್ ನಟ ಅನುಪಮ್ ಖೇರ್ ಅವರಿಗೆ ಪಾಕಿಸ್ತಾನ ವೀಸಾ ನಿರಾಕರಿಸಲಾಗಿತ್ತು. ಅನುಪಮ್ ಖೇರ್ ಫೆ. 5ರಂದು ಕರಾಚಿಯಲಲ್ಲಿ ಸಾಹಿತ್ಯೋತ್ಸವದಲ್ಲಿ ಪಾಲ್ಗೊಳ್ಳುವುದಿದೆ. ಆದರೆ ಪಾಕಿಸ್ತಾನವು ಅವರಿಗೆ ವೀಸಾ ನಿರಾಕರಿಸುವುದರಿಂದ ಅಲ್ಲಿಗೆ ಹೋಗಲು ಅಸಾಧ್ಯವಾಗಿದೆ. ಈ ಬಗ್ಗೆ ತೀವ್ರ ನಿರಾಶೆಯಾಗಿದೆ ಎಂದು ಅನುಪಮ್ ಖೇರ್ ತಿಳಿಸಿದ್ದರು.
Comments are closed.