ರಾಷ್ಟ್ರೀಯ

OLX ನಲ್ಲಿ ಸಿಕ್ಕಿತು 9 ತಿಂಗಳ ಹಿಂದೆ ಕಳವಾಗಿದ್ದ ಕಾರು….!

Pinterest LinkedIn Tumblr

olx

ನೋಯ್ಡಾ: 9 ತಿಂಗಳ ಹಿಂದೆ ಕಳುವಾಗಿದ್ದ ವ್ಯಕ್ತಿಯೊಬ್ಬನ ಕಾರು, OLX ನಲ್ಲಿ ಹುಡುಕುತ್ತಿರುವಾಗ ಪತ್ತೆಯಾಗಿರುವ ಘಟನೆ ನೋಯ್ಡಾದಲ್ಲಿ ನಡೆದಿದೆ.

ಕಾರುಕೊಳ್ಳಲು OLX ನಲ್ಲಿ ಹುಡುಕುತ್ತಿರುವಾಗ ಕಳುವಾಗಿದ್ದ ತನ್ನದೇ ಹೋಂಡಾ ಸಿಟಿ ಕಾರು ಪತ್ತೆಯಾಗಿದೆ. ನಂತರ ಜಾಹೀರಾತುದಾರರನ್ನು ಭೇಟಿಯಾಗುವ ಸಂದರ್ಭದಲ್ಲಿ ಪೊಲೀಸರಿಗೆ ಮಾಹಿತಿ ನೀಡಿ ಖದೀಮರನ್ನು ಬಂಧಿಸಲಾಗಿದೆ.

ರಿಯಲ್ ಎಸ್ಟೇಟ್ ದಲ್ಲಾಳಿಯಾದ ಕುಲವಂತ್ ಸಿಂಗ್ ಎಂಬರುವರು ಮನೆ ಮುಂದೆ ನಿಲ್ಲಿಸಿದ್ದ ಕಾರು ಕಳೆದ ಆಗಸ್ಟ್ ನಲ್ಲಿ ಕಳುವಾಗಿತ್ತು. ಈ ಬಗ್ಗೆ ಸಿಂಗ್ ಪ್ರಕರಣ ಕೂಡ ದಾಖಲಿಸಿದ್ದರು. ಆದರೆ ಕಾರು ಎಲ್ಲೂ ಪತ್ತೆಯಾಗದ ಕಾರಣ, ಬಳಕೆ ಮಾಡಿದ ಕಾರು ಖರೀದಿ ಮಾಡಲು ಮುಂದಾದರು.

ನಂತರ OLX ನಲ್ಲಿ ಕಾರು ಹುಡುಕುತ್ತಿದ್ದಾಗ ಕಳುವಾಗಿದ್ದ ತಮ್ಮದೇ ಕಾರು ವೆಬ್ ಸೈಟ್ ನಲ್ಲಿ ಕಣ್ಣಿಗೆ ಬಿದ್ದಿದೆಯ ಅದರಲ್ಲಿ ಜಾಹೀರಾತುದಾರನ ಫೋನ್ ನಂಬರ್ ಕೂಡ ಇತ್ತು. ಆ ವ್ಯಕ್ತಿಯನ್ನು ಸಂಪರ್ಕಿಸಿದ ಸಿಂಗ್ ವ್ಯವಹಾರ ಕುದಿಸಿದರು.ಕಾರು ಕೊಳ್ಳಲು ಸಿಂಗ್ ಆಗಮಿಸಿದ ವೇಳೆಯಲ್ಲಿ ಮುಫ್ತಿಯಲ್ಲಿದ್ದ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಲೋನಿ ಅಹ್ಮದ್ ಎಂಬಾತ ತಾನು ಆ ಕಾರನ್ನು ಬೇರೆಯವರಿಂದ ಖರೀದಿಸಿರುವುದಾಗಿ ತಿಳಿಸಿದ. ಮುಖ್ಯ ಆರೋಪಿ ಝುಲ್ಫೀಕರ್ ಎಂಬುವನನ್ನು ಪೊಲೀಸರು ಬಂಧಿಸಿದ್ದಾರೆ.

Comments are closed.