ಕರ್ನಾಟಕ

ಪಕ್ಷ ಸಂಘಟಿಸಲು 40 ಜನ ಸೇನಾಪತಿಗಳನ್ನು ನೇಮಿಸಿದ ಯಡಿಯೂರಪ್ಪ ….ತಮ್ಮ ಬ್ರಿಗೇಡ್‌ ನಲ್ಲಿ ಸ್ಥಾನಮಾನದ ವಿವರ ಇಲ್ಲಿದೆ …

Pinterest LinkedIn Tumblr

yaddi

ಬೆಂಗಳೂರು: ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಪಕ್ಷವನ್ನು ಮತ್ತಷ್ಟು ಸಂಘಟಿಸಲು 40 ಮಂದಿ ಸೇನಾಧಿಪತಿಗಳನ್ನು ನೇಮಕ ಮಾಡಿದ್ದಾರೆ.

ಹೊಸದಾಗಿ ನೇಮಕ ಮಾಡಿರುವ ಪದಾಧಿಕಾರಿಗಳಲ್ಲಿ ಹೊಸಬರಿಗೆ ಹೆಚ್ಚಿನ ಅವಕಾಶ ನೀಡದೆ ಹಳೆ ಮುಖಗಳಿಗೆ ಮಣೆ ಹಾಕಿದ್ದಾರೆ. ಮಾಜಿ ಸಚಿವರಾದ ಅರವಿಂದ ಲಿಂಬಾವಳಿ, ಶೋಭಾ ಕರಂದ್ಲಾಜೆ, ಸಿಟಿ ರವಿ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಗಳಾಗಿ ನೇಮಿಸಲಾಗಿದೆ. ರವಿಕುಮಾರ್ ಅವರೊಬ್ಬರೇ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿರುವವರ ಪೈಕಿ ಹೊಸಬರಾಗಿದ್ದಾರೆ.

ಬಿಜೆಪಿಯ ರಾಜ್ಯಾಧ್ಯಕ್ಷ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಇಂದು ನೂತನ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಸಂಘಟನಾ ಕಾರ್ಯದರ್ಶಿಯಾಗಿ ಆರ್.ಎಸ್.ಎಸ್ ಮುಖಂಡ ಅರುಣ್ ಕುಮಾರ್ ನೇಮಕಗೊಂಡಿದ್ದಾರೆ.

ಉಳಿದಂತೆ ತಲಾ 10 ಮಂದಿ ಉಪಾಧ್ಯಕ್ಷರು, ಕಾರ್ಯದರ್ಶಿಗಳನ್ನು ನೇಮಕ ಮಾಡಲಾಗಿದೆ. ಬಿಜೆಪಿ ಯುವ ಮೋರ್ಚಾಕ್ಕೆ ಸಂಸದ ಪ್ರತಾಪ ಸಿಂಹರವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಮಹಿಳಾ ಮೋರ್ಚಾಕ್ಕೆ ಭಾರತಿ ಮಗ್ದುಂ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ಪದಾಧಿಕಾರಿಗಳು:
ಉಪಾಧ್ಯಕ್ಷರುಗಳು: ಗೋವಿಂದ ಕಾರಜೋಳ, ಶ್ರೀರಾಮುಲು, ನಾಗರತ್ನ ಕುಪ್ಪಿ, ಬಾಬುರಾವ್ ಚೌಹಣ್, ಭಾನು ಪ್ರಕಾಶ್, ಎಂ. ನಾಗರಾಜು, ಟಿ. ಸೋಮಶೇಖರ್, ನಿರ್ಮಲ ಕುಮಾರ ಸುರಾನಾ, ಪಿ.ಸಿ. ಮೋಹನ, ಅನಂತ ಕುಮಾರ್ ಹೆಗಡೆ.

ಪ್ರಧಾನ ಕಾರ್ಯದರ್ಶಿಗಳು
ಅರವಿಂದ ಲಿಂಬಾವಳಿ, ಶೋಭಾ ಕರಂದ್ಲಾಜೆ, ಸಿ.ಟಿ. ರವಿ, ಎನ್. ರವಿಕುಮಾರ್, ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್.

ರಾಜ್ಯಕಾರ್ಯದರ್ಶಿಗಳು
ಶಂಕರಪ್ಪ, ಜಗದೀಶ್ ಹಿರೇಮನಿ, ಕರ‌ಡಿ ಸಂಗಣ್ಣ, ತೇಜಸ್ವಿನಿ, ಸುರೇಶ್ ಅಂಗಡಿ, ಸುರೇಶ್ ಗೌಡ, ಪೂರ್ಣಿಮಾ ಶ್ರೀನಿವಾಸ್, ಟಿ. ವಿಕ್ರಮಾರ್ಜುನ ಹೆಗಡೆ, ಮುನಿರಾಜು ಗೌಡ, ಎಂ. ಜಯದೇವ್.

ಪಕ್ಷದ ವಕ್ತಾರರು
ಸುರೇಶ್ ಕುಮಾರ್, ಗೋ. ಮಧುಸೂಧನ್

ಸಹ ವಕ್ತಾರರು
ಮಂಜುಳಾ, ಭಾರತೀ ಶೆಟ್ಟಿ, ಮಾಳವಿಕಾ ಅವಿನಾಶ್, ಮೋಹನ ಲಿಂಬಿಕಾಯಿ, ನಾನಾ ಮುಖ್ಯಸ್ಥರಾಗಿ ಶಾಂತಾರಾಮ್ ಅವರನ್ನು ನೇಮಕ ಮಾಡಲಾಗಿದೆ.

ವಿವಿಧ ಮೋರ್ಚಾಗಳ ಅಧ್ಯಕ್ಷರುಗಳು
ಮಹಿಳಾ ಮೋರ್ಚಾ- ಭಾರತಿ ಮಗ್ದುಂ, ರೈತ ಮೋರ್ಚಾ -ಸಿ.ಎಚ್. ವಿಜಯಶಂಕರ, ಎಸ್.ಟಿ. ಮೋರ್ಚಾ-ರಾಜುಗೌಡ ನಾಯಕ್, ಎಸ್.ಸಿ ಮೋರ್ಚಾ-ಡಿ.ಎಸ್ ವೀರಯ್ಯ. ಅಲ್ಪ ಸಂಖ್ಯಾತ ಮೋರ್ಚಾ- ಅಬ್ದುಲ್ ಅಜೀಂ, ಯುವ ಮೋರ್ಚಾ- ಪ್ರತಾಪ್ ಸಿಂಹ, ಹಿಂದುಳಿದ ಮೋರ್ಚಾ- ಪುಟ್ಟಸ್ವಾಮಿ, ಸ್ಲಂ ಮೋರ್ಚಾ- ಜಯಪ್ರಕಾಶ್ ಅಂಬಾರ್ ಕರ

Comments are closed.