
ಹಾಸನ: ನಗರದ ಹಿಮ್ಸ್ ಆಸ್ಪತ್ರೆಯಲ್ಲಿ ಸೋಮವಾರ ರಾತ್ರಿ ಮಹಿಳೆಯೊಬ್ಬರು 7.25 ಕೆ.ಜಿ. ತೂಕದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಇದೀಗ ಈ ಮಗು ಕರ್ನಾಟಕದ ದೈತ್ಯ ಮಗು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಅಥಣಿಯಲ್ಲಿ ಬೇಕರಿ ಹೊಂದಿರುವ ಆಲೂರು ತಾಲೂಕು ದೊಡ್ಡಿಹಳ್ಳಿ ಗ್ರಾಮ ಮೂಲದ ಅರುಣ್ ಅವರ ಪತ್ನಿ ನಂದಿನಿ ಈ ಮಗುವಿಗೆ ಜನ್ಮ ನೀಡಿದ್ದಾರೆ. ನಂದಿನಿ ಅವರಿಗೆ ಸಿಸೇರಿಯನ್ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಲಾಗಿದ್ದು, ಅತಿ ತೂಕದ ಮಗುವಿಗೆ ಜನ್ಮ ನೀಡಿರುವ ತಾಯಿ ಆರೋಗ್ಯವಾಗಿದ್ದಾರೆ. ಮಗುವಿನ ಆರೋಗ್ಯ ತಪಾಸಣೆ ನಡೆಸಿ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಮಗು ರಾಜ್ಯದಲ್ಲೆ ಅತಿ ತೂಕದ ನವಜಾತ ಶಿಶು ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
ಕಳೆದ 2 ವರ್ಷಗಳ ಹಿಂದೆ ನಂದಿನಿ ಮತ್ತು ಅರುಣ ಒಬ್ಬರೊನ್ನಬ್ಬರು ಪ್ರೀತಿಸಿ ಮದುವೆಯಾಗಿದ್ದು, ಇದು ಅವರಿಬ್ಬರಿಗೆ ಚೊಚ್ಚಲ ಮಗುವಾಗಿದೆ. ಕಳೆದ ಮೂರು ದಿನಗಳ ಹಿಂದೆ ಹೆರಿಗೆ ನೋವು ಕಾಣಿಸಿಕೊಂಡಾಗ ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಸೋಮವಾರ ಸಂಜೆ ಮಗುವಿನ ಜನನವಾಗಿದ್ದು, ಮಗುವನ್ನು ಈಗ ಜಿಲ್ಲಾಸ್ಪತ್ರೆಯ ಶಿಶು ನಿಗಾ ಘಟಕದಲ್ಲಿಡಲಾಗಿದ್ದು, ಸದ್ಯ ತಾಯಿ ಮತ್ತು ಮಗು ಈಗ ಆರೋಗ್ಯವಾಗಿದ್ದಾರೆ.
ಪೋಷಕರು ಕೂಡ ತಮ್ಮ ಮಗುವಿನ ಕುರಿತು ಸಂತಸ ವ್ಯಕ್ತಪಡಿಸಿದ್ದಾರೆ. ವೈದ್ಯರೂ ಸಹ ಮಗುವಿನ ಕುರಿತು ಆಶ್ಚರ್ಯ ವ್ಯಕ್ತಪಡಿಸಿದ್ದು ಇದು ದೇಶದಲ್ಲಿಯೇ ವಿಶೇಷ ಮಗುವೆಂದು ಅಭಿಪ್ರಾಯಪಟ್ಟಿದ್ದಾರೆ.
Comments are closed.