ರಾಷ್ಟ್ರೀಯ

ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಬಿಎಸ್‌ಎಫ್ ಯೋಧರು

Pinterest LinkedIn Tumblr

bsf

ಕಾಶ್ಮೀರದ ಕುಪ್ವಾರಾ ಹಾಗೂ ಶೋಪಿಯಾನ್ ಜಿಲ್ಲೆಗಳಲ್ಲಿ ಇಂದು ನಡೆದ ಭಾರೀ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರನ್ನು ಗಡಿಭದ್ರತಾ ಪಡೆ (ಬಿಎಸ್‌ಎಫ್) ಯೋಧರು ಹೊಡೆದುರುಳಿಸಿದ್ದಾರೆ. ಶೋಪಿಯಾನ್ ಜಿಲ್ಲೆಯ ಪೆಹ್ಲಿಪುರದಲ್ಲಿ ಬಿಎಸ್‌ಎಫ್ ಯೋಧರು ಮತ್ತು ಉಗ್ರರ ನಡುವೆ ಇಂದು ಮುಂಜಾನೆ ನಡೆದ ಗುಂಡಿನ ಕಾಳಗದಲ್ಲಿ ಹಿಜ್ಬುಲ್ ಮುಜಾಹಿದೀ (ಹೆಚ್‌ಎಂ) ಸಂಘಟನೆಯ ಭಯೋತ್ಪಾದಕ ಫಾರೂಕ್ ಅಹ್ಮದ್ ಎಂಬುವವನು ಹತನಾಗಿದ್ದಾನೆ. ಕುಪ್ವಾರಾ ಜಿಲ್ಲೆಯಲ್ಲಿ ನಡೆದ ದಾಳಿಯಲ್ಲಿ ಒಬ್ಬ ಅಪರಿಚಿತ ಉಗ್ರ ಬಲಿಯಾಗಿದ್ದಾನೆ. ಕುಪ್ವಾರಾ ಗಡಿಯಲ್ಲಿ ಇನ್ನೂ ಕೂಡ ಗುಂಡಿನ ಚಕಮಕಿ ಮುಂದುವರೆದಿದೆ ಎಂದು ವಕ್ತಾರರು ತಿಳಿಸಿದ್ದಾರೆ.

ಕದನ ವಿರಾಮ ಉಲ್ಲಂಘನೆ:
ಕಾಶ್ಮೀರದ ಯುರಿ ಸೆಕ್ಟರ್‌ನ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ)ಯಲ್ಲಿ ಪಾಕಿಸ್ಥಾನ ಪಡೆಗಳು ಮತ್ತೆ ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಸೇನಾಕಾರಿಗಳು ತಿಳಿಸಿದ್ದಾರೆ. ಯೂರಿ ಸೆಕ್ಟರ್‌ನ ಕಮಲ್ ಕೋಟೆ ಪ್ರದೇಶದಲ್ಲಿ ಬೆಳಗಿನ ಜಾವ ನಿಯಂತ್ರಣ ರೇಖೆ ಬಳಿ ಈ ದಾಳಿ ನಡೆದಿದೆ.

Comments are closed.