
ದೆಹಲಿ; ಸಕ್ರಿಯ ರಾಜಕಾರಣದಲ್ಲಿ ತೊಡಗಿಕೊಂಡು, ದೇಶದ ಅಭಿವೃದ್ಧಿಯ ಕನಸು ಹೊತ್ತು ಸದಾ ಚಟುವಟಿಕೆಯಿಂದ ಕೂಡಿರುವ ಪ್ರಧಾನಿ ನರೇಂದ್ರ ಮೋದಿ, ಭಾನುವಾರ ತಮ್ಮ ತಾಯಿಯೊಂದಿಗೆ ಕೆಲ ಕಾಲ ಕಳೆದರು.


ಇದೇ ಮೊದಲ ಬಾರಿಗೆ ಪ್ರಧಾನ ಮಂತ್ರಿ ಅಧಿಕೃತ ನಿವಾಸ 7 ರೇಸ್ ಕೋಸ್ ರೋಡ್‌ನಲ್ಲಿ ತಮ್ಮ ತಾಯಿ ಹೀರಾಬೆನ್ ಜತೆ ಪ್ರಧಾನಿ ಕಾಲ ಕಳೆದಿದ್ದಾರೆ. ಹೀರಾಬೆನ್ ಪ್ರಧಾನಿಮಂತ್ರಿ ಅಧಿಕೃತ 7ಆರ್‌ಸಿಆರ್‌ಗೆ ಆಗಮಿಸಿದ್ದರು. ಈ ವೇಳೆ ಸ್ವತಃ ಮೋದಿ ತಮ್ಮ ತಾಯಿಯನ್ನು ಗಾಲಿ ಕುರ್ಚಿಯಲ್ಲಿ ತಮ್ಮ ನಿವಾಸದ ಸುತ್ತಲೂ ಇದ್ದ ಉದ್ಯಾನದಲ್ಲಿ ತಿರುಗಾಡಿಸಿದರು.
ತಮ್ಮ ತಾಯಿಯೊಂದಿಗೆ ಕಳೆದ ಸಮಯದ ಫೋಟೊಗಳನ್ನು ಟ್ವಿಟರ್‌ನಲ್ಲಿ ಹಾಕಿದ್ದು, ಮೊದಲ ಬಾರಿಗೆ ನನ್ನ ತಾಯಿ ಆರ್‌ಸಿಆರ್‌ಗೆ ಬಂದಿದ್ದರು.ಈಗ ಮತ್ತೆ ಗುಜರಾತ್‌ಗೆ ತೆರಳುತ್ತಿದ್ದಾರೆ. ಬಹಳ ದಿನಗಳ ನಂತರ ಅವರನ್ನು ಭೇಟಿಯಾಗಿ, ಅವರೊಂದಿಗೆ ಕಾಲ ಕಳೆದಿದ್ದು ಸಂತಸ ತಂದಿದೆ ಎಂದು ಬರೆದುಕೊಂಡಿದ್ದಾರೆ.