
ನವದೆಹಲಿ: ರಾಷ್ಟ್ರೀಯ ತಂತ್ರಜ್ಞಾನ ದಿನದ ಅಂಗವಾಗಿ ಬುಧವಾರ ದೇಶದ ಜನತೆಗೆ ಶುಭ ಕೋರಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಸಮಾಜದಲ್ಲಿ ಉತ್ತಮ ಬದಲಾವಣೆ ತರಲು ನಾಗರಿಕರು ಆಧುನಿಕ ತಂತ್ರಜ್ಞಾನವನ್ನು ಉಪಯೋಗಿಸಬೇಕು ಎಂದು ಕರೆ ನೀಡಿದ್ದಾರೆ.
ಟ್ವಿಟ್ಟರ್ ನಲ್ಲಿ ಸಂದೇಶ ನೀಡಿದ ಅವರು, ದೇಶದ ಎಲ್ಲಾ ನಾಗರಿಕರಿಗೆ ಮುಖ್ಯವಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಉತ್ಸಾಹಿಗಳಿಗೆ ವಿಶೇಷವಾಗಿ ಶುಭ ಕೋರಿದರು.ನಮ್ಮ ದಿನ ನಿತ್ಯದ ಜೀವನದಲ್ಲಿ ತಂತ್ರಜ್ಞಾನವನ್ನು ಬಳಸೋಣ. ಸಮಾಜದಲ್ಲಿ ತಂತ್ರಜ್ಞಾನದ ಬಳಕೆ ಧನಾತ್ಮಕ ಬದಲಾವಣೆ ತರುತ್ತದೆ ಜೈ ಜವಾನ್, ಜೈ ಕಿಸಾನ್ ಜೈ ವಿಜ್ಞಾನ್ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
ಇಂದು ಸಂಜೆ ದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರೀಯ ತಂತ್ರಜ್ಞಾನ ದಿನ ಆಚರಣೆಯಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಭಾಗವಹಿಸಲಿದ್ದಾರೆ. ಈ ವರ್ಷದ ಧ್ಯೇಯ ”ಸ್ಟಾರ್ಟ್ಅಪ್ ಇಂಡಿಯಾದ ತಂತ್ರಜ್ಞಾನ ಸಾಧ್ಯತೆಗಾರರು.”
ರಾಷ್ಟ್ರೀಯ ತಂತ್ರಜ್ಞಾನ ದಿನವನ್ನು ಪ್ರತಿವರ್ಷ ಮೇ 11ರಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಆಚರಿಸುತ್ತಿದ್ದು, ದೇಶದಲ್ಲಿ ತಂತ್ರಜ್ಞಾನದ ಸಂಶೋಧನೆಯಲ್ಲಿ ಆದ ಸಾಧನೆಯನ್ನು ಸಂಭ್ರಮಿಸಲು ಆಚರಿಸಲಾಗುತ್ತದೆ.