ಅಹಮದಾಬಾದ್ (ಪಿಟಿಐ): ಬಾಂಬ್ ಬೆದರಿಕೆಯ ಹಿನ್ನೆಲೆಯಲ್ಲಿ 125 ಪ್ರಯಾಣಿಕರು ಹಾಗೂ ಆರು ಸಿಬ್ಬಂದಿ ಹೊತ್ತು ಅಹಮದಾಬಾದ್ನಿಂದ ಮುಂಬೈಗೆ ಪ್ರಯಾಣಿಸುತ್ತಿದ್ದ ಜೆಟ್ ಏರ್ವೇಸ್ನ ವಿಮಾನ ಎರಡು ಗಂಟೆಗಳ ವಿಳಂಬವಾಗಿ ಪ್ರಯಾಣಿಸಿತು.
ಭದ್ರತಾ ಎಚ್ಚರಿಕೆಯ ಬಳಿಕ ವಿಮಾನವನ್ನು ಸಂಪೂರ್ಣ ತಪಾಸಣೆಗೆ ಒಳಪಡಿಸಲಾಯಿತು. ಎಲ್ಲಾ ಪ್ರಯಾಣಿಕರನ್ನು ಕೆಳಗಿಳಿಸಿ, ಲಗೇಜು, ಸರಕು ವಿಭಾಗ ಸೇರಿದಂತೆ ಭದ್ರತಾ ಪಡೆಗಳು ವಿಮಾನವನ್ನು ಇಡೀಯಾಗಿ ಜಾಲಾಡಿದರು ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.
ಶೋಧದ ವೇಳೆ ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಲಿಲ್ಲ ಎಂದು ಜೆಟ್ ಏರ್ವೇಸ್ ವಿಮಾನ ಸಂಸ್ಥೆಯ ವಕ್ತಾರರೊಬ್ಬರು ತಿಳಿಸಿದ್ದಾರೆ.
‘ಅಹಮದಾಬಾದ್ನಿಂದ ಮುಂಬೈಗೆ ಪ್ರಯಾಣಿಸುತ್ತಿದ್ದ ಜೆಟ್ಏರ್ವೇಸ್ನ ಎಸ್2 4738 ವಿಮಾನಕ್ಕೆ ಭದ್ರತಾ ಬೆದರಿಕೆ ಎದುರಾಗಿತ್ತು. ವಿಮಾನವನ್ನು ಸಂಪೂರ್ಣವಾಗಿ ತಪಾಸಣೆ ಮಾಡಲಾಯಿತು’ ಎಂದು ಅವರು ತಿಳಿಸಿದ್ದಾರೆ.
ರಾಷ್ಟ್ರೀಯ