ಕನ್ನಡ ವಾರ್ತೆಗಳು

ಅಧಿಕೃತ ದಾಖಲೆ ಇಲ್ಲದೆ ಅಕ್ರಮ ಮರ ಸಾಗಟ: ವಾಹನ ಹಾಗೂ ಸೊತ್ತು ವಶ

Pinterest LinkedIn Tumblr

Wood_Lory_sezed

ಮ೦ಗಳೂರು ಮಾರ್ಚ್ 18  : ಬಂಟ್ವಾಳ ತಾಲೂಕು ಕುರ್ನಾಡು ಗ್ರಾಮದ ಮಿತ್ತಕೋಡಿ ಎಂಬಲ್ಲಿ ಅಕ್ರಮವಾಗಿ ಅಧಿಕೃತ ದಾಖಲಾತಿಗಳಿಲ್ಲದೆ ಮರ ಸಾಗಾಟ ಮಾಡುತ್ತಿದ್ದ ಲಾರಿಯನ್ನು ಶುಕ್ರವಾರ ಅರಣ್ಯ ಇಲಾಖೆ ವಶಪಡಿಸಿಕೊಂಡಿದೆ.

ಕಿರಾಲ್ ಬೋಗಿ ಜಾತಿಯ ಮರದ 31 ದಿಮ್ಮಿ ಮತ್ತು 17  ಕಂಬಗಳನ್ನು ಲಾರಿಯಲ್ಲಿ ಸಾಗಾಟ ಮಾಡುತ್ತಿರುವ ಪ್ರಕರಣವನ್ನು ಪತ್ತೆ ಹಚ್ಚಿ ವಾಹನ ಹಾಗೂ ಸೊತ್ತುಗಳನ್ನು ವಶಪಡಿಸಿ, ಲಾರಿ ಚಾಲಕ ಸಿದ್ದೀಕ್ ಎಂಬವರನ್ನು ಬಂಧಿಸಿ ಮುಚ್ಚಳಿಕೆ ಪತ್ರದ ಮೂಲಕ ಬಿಡುಗಡೆಗೊಳಿಸಲಾಗಿದೆ. ಸದ್ರಿ ವಾಹನವು ಬೆಳ್ತಂಗಡಿ ಪಡಂಗಡಿಯ ಬಾಲಾಕೃಷ್ಣ ಶೆಟ್ಟಿಯವರ ಮಾಲಿಕತ್ವದಲ್ಲಿರುವುದಾಗಿದೆ.

ಕಾರ್ಯಾಚರಣೆಯನ್ನು ಮಂಗಳೂರು ವಲಯ ಅರಣ್ಯಾಧಿಕಾರಿ ಪಿ. ಶ್ರೀಧರ್, ಮತ್ತು ಸಿಬ್ಬಂದಿಗಳಾದ ಉಪ ವಲಯ ಅರಣ್ಯಾಧಿಕಾರಿ ಬಿ. ಜಗರಾಜ್, ರವಿ ಕುಮಾರ್ ಅರಣ್ಯ ರಕ್ಷಕರಾದ ಜಿತೇಶ್ ಪಿ. ಸುಕುಮಾರ್, ಅರಣ್ಯ ವೀಕ್ಷಕರಾದ ದೇವದಾಸ್ ಇವರು ಸಹಕರಿಸಿದರು.

ಪ್ರಕರಣದ ತಬಿಖೆಯನ್ನು ಮಂಗಳೂರು ವಿಭಾಗ ಡಿಸಿ‌ಎಫ್ ಡಾ:ಕೆ.ಟಿ.ಹನುಮಂತಪ್ಪ, ಇವರ ನಿರ್ದೇಶನದಂತೆ, ಎಸಿ‌ಎಫ್ ಶ್ರೀಧರ್ ನಾಯ್ಕ್ ನಡೆಸುತ್ತಿದ್ದಾರೆ.

Write A Comment