ರಾಷ್ಟ್ರೀಯ

‘ಭಾರತ್ ಮಾತಾ ಕಿ ಜೈ’ ಹೇಳಲು ನಿರಾಕರಿಸಿದ್ದ ಓವೈಸಿಯಿಂದ ‘ಜೈ ಹಿಂದ್’ ಘೋಷಣೆ

Pinterest LinkedIn Tumblr

asaduddin

ಹೈದರಾಬಾದ್: ನನ್ನ ಕುತ್ತಿಗೆ ಮೇಲೆ ಕತ್ತಿಯಿಟ್ಟರೂ ನಾನು ಭಾರತ್ ಮಾತಾ ಕಿ ಜೈ ಎಂದು ಹೇಳಲ್ಲ ಎಂದಿದ್ದ ವಿವಾದಾತ್ಮಕ ಮುಸ್ಲಿಂ ನಾಯಕ, ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈ ಈಗ ಜೈ ಹಿಂದ್ ಎಂದು ಹೇಳುವ ಮೂಲಕ ಸುದ್ದಿಯಾಗಿದ್ದಾರೆ.

ನೂತನ ತಲೆಮಾರು ಮದರ್ ಇಂಡಿಯಾ ಎಂದು ಘೋಷಣೆ ಕೂಗುವ ಬಗ್ಗೆ ಚಿಂತನೆ ಮಾಡಬೇಕು ಎಂಬ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಓವೈಸಿ, ನನ್ನ ಕುತ್ತಿಗೆ ಮೇಲೆ ಕತ್ತಿ ಹಿಡಿದು ಆ ಘೋಷಣೆ ಕೂಗು ಅಂದರೂ ನಾನು ಕೂಗಲ್ಲ ಎಂದಿದ್ದರು.

ಇದಾದ ಮಾರನೇ ದಿನವೇ ಅಲಹಬಾದ್ ಕೋರ್ಟ್ ನಲ್ಲಿ ತನ್ನ ವಿರುದ್ಧದ ಪ್ರಕರಣ ದಾಖಲಾಗಿರುವ ಸುದ್ದಿಯ ಬಗ್ಗೆ ಪ್ರತಿಕ್ರಿಯಿಸಿದ ಓವೈಸಿ, ‘ನನಗೆ ಕೋರ್ಟ್ ಮೇಲೆ ಸಂಪೂರ್ಣ ನಂಬಿಕೆ ಇದೆ. ನನಗೆ ನ್ಯಾಯ ಸಿಕ್ಕೆ ಸಿಗುತ್ತೆ. ಜೈ ಹಿಂದ್’ ಎಂದು ಘೋಷಣೆ ಕೂಗಿರುವುದಾಗಿ ಎಎನ್ಐ ವರದಿ ಮಾಡಿದೆ.

Write A Comment