ರಾಷ್ಟ್ರೀಯ

ಹೈದರಾಬಾದ್’ನಲ್ಲಿ ಭೀಕರ ರಸ್ತೆ ಅಪಘಾತ: 5 ವಿದ್ಯಾರ್ಥಿಗಳು ಸಾವು, ಹಲವರಿಗೆ ಗಾಯ

Pinterest LinkedIn Tumblr

ap-accident

ಸುರಂಪಲೆಮ್(ಹೈದರಾಬಾದ್): ಕಳೆದ ತಡರಾತ್ರಿ ಖಾಸಗಿ ಬಸ್ಸು ಹೈದರಾಬಾದ್ ನ ಗೊಲ್ಲಪುಡಿ ಮತ್ತು ಇಬ್ರಾಹಿಂಪಟ್ನಮ್ ಮಧ್ಯೆ ಸುರಂಪಲೆಮ್ ನಲ್ಲಿ ಮಗುಚಿ ಬಿದ್ದ ಪರಿಣಾಮ ಅದರಲ್ಲಿದ್ದ ಹೈದರಾಬಾದಿನ ಒಸ್ಮಾನಿಯಾ ವೈದ್ಯಕೀಯ ಕಾಲೇಜಿನ ಐವರು ವಿದ್ಯಾರ್ಥಿಗಳು ಸ್ಥಳದಲ್ಲಿಯೇ ಸಾವನ್ನಪ್ಪಿ ಹಲವು ಮಂದಿ ಗಾಯಗೊಂಡಿದ್ದಾರೆ.

ಅಮಲಪುರಂನಲ್ಲಿ ಕ್ರೀಡಾಸ್ಪರ್ಧೆಯಲ್ಲಿ ಭಾಗವಹಿಸಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಹೈದರಾಬಾದಿಗೆ ಹಿಂತಿರುಗುತ್ತಿದ್ದರು. ಬಸ್ಸಿನ ಚಾಲಕ ಪಾನಮತ್ತನಾಗಿದ್ದರಿಂದ ನಿಯಂತ್ರಣ ತಪ್ಪಿ ಮರಕ್ಕೆ ನಂತರ ವಿದ್ಯುತ್ ಕಂಬಕ್ಕೆ ಹೋಗಿ ಢಿಕ್ಕಿ ಹೊಡೆಯಿತು. ಢಿಕ್ಕಿ ಹೊಡೆದ ರಭಸಕ್ಕೆ ಬಸ್ಸು ಮೇಲೆ ಹಾರಿ ಪಕ್ಕದಲ್ಲಿದ್ದ ಮೈದಾನಕ್ಕೆ ಉರುಳಿ ಬಿದ್ದಿದೆ.

ಬಸ್ಸಿನ ಚಾಲಕ ಸೇರಿದಂತೆ ಐವರು ಕಾಲೇಜು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಸೆಮಿ ಸ್ಲೀಪರ್ ಬಸ್ಸು ರಾತ್ರಿ 11 ಗಂಟೆ ಸುಮಾರಿಗೆ ಅಪಘಾತವಾಗಿದ್ದು, ಸುಮಾರು ಹೊತ್ತಿನವರೆಗೆ ಆ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು. ಅದು ಹೆದ್ದಾರಿಯಾಗಿದ್ದರಿಂದ ಪೊಲೀಸರು ವಾಹನ ಸಂಚಾರಕ್ಕೆ ಬಿಡಲಿಲ್ಲ. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಹೆಚ್ಚುವರಿ ಪೊಲೀಸ್ ಆಯುಕ್ತ ಮಹೇಶ್ ಚಂದ್ರ ಲಡ್ಡ, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

Write A Comment