ಕನ್ನಡ ವಾರ್ತೆಗಳು

ಪುತ್ತೂರು: ಕೋಮುಗಲಭೆಗಳಿಗೆ ಪ್ರಚೋದನೆ – ಇಬ್ಬರು ರೌಡಿಗಳ ಗಡಿಪಾರಿಗೆ ಆದೇಶ

Pinterest LinkedIn Tumblr

ಪುತ್ತೂರು, ಮಾ.8 : ಕೋಮುಗಲಭೆ ನಡೆಸುತ್ತಿದ್ದ ಮತ್ತು ಗಲಭೆಗಳಿಗೆ ಪ್ರಚೋದನೆ ನೀಡಿ ಗೂಂಡಾಗಿರಿ ಪ್ರದರ್ಶಿಸುತ್ತಿದ್ದ ಇಬ್ಬರು ರೌಡಿಗಳನ್ನು ಗಡೀಪಾರು ಮಾಡಿದ ಜಿಲ್ಲಾ ಪೊಲೀಸ್ ಇಲಾಖೆಯ ಆದೇಶವನ್ನು ಎ.ಸಿ. ನ್ಯಾಯಾಲಯವು ಎತ್ತಿ ಹಿಡಿದಿದ್ದು, ಇಬ್ಬರನ್ನೂ ತಕ್ಷಣ ಗಡೀಪಾರು ಮಾಡುವಂತೆ ಆದೇಶಿಸಿದೆ.

ಗಡಿಪಾರಿಗೆ ಆದೇಶಗೊಂಡವರನ್ನು ಬೆಳಂದೂರಿನ ಧನ್ಯಕುಮಾರ ಮತ್ತು ಮೊಟ್ಟೆತ್ತಡ್ಕ ನಿವಾಸಿ ಶಕೀಲ್ ಎಂದು ಹೆಸರಿಸಲಾಗಿದೆ.

ಪುತ್ತೂರು ಉಪವಿಭಾಗ ವ್ಯಾಪ್ತಿಯ ಪುತ್ತೂರು, ಬಂಟ್ವಾಳ, ಸುಳ್ಯ ಮತ್ತು ಬೆಳ್ತಂಗಡಿ ತಾಲೂಕುಗಳಲ್ಲಿ ಎಲ್ಲಿಯೂ ಈ ಆರೋಪಿಗಳು ಆರು ತಿಂಗಳ ಕಾಲ ಕಾಣಿಸಿಕೊಳ್ಳುವಂತಿಲ್ಲ. ಇವರನ್ನು ಸಾರ್ವಜನಿಕರು ಕಂಡರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ. ಎ.ಸಿ. ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಆರೋಪಿಗಳಿಬ್ಬರೂ ಹೈಕೋರ್ಟ್ ಮೆಟ್ಟಲನ್ನೇರಿದ್ದಾರೆ.

ಸಂಘ ಪರಿವಾರದ ಸಂಘಟನೆಗಳಲ್ಲಿ ಸಕ್ರಿಯನಾಗಿರುವ ಧನ್ಯ ಕುಮಾರ ವಿರುದ್ಧ ಪುತ್ತೂರು ಠಾಣೆಯಲ್ಲಿ ಕೋಮುಗಲಭೆ, ಗೋಸಾಗಾಟಗಾರರ ಮೇಲೆ ಹಲ್ಲೆ, ಗಲಭೆಗೆ ಪ್ರಚೋದನೆ ಇತ್ಯಾದಿ ಸೇರಿದಂತೆ ಹಲವಾರು ಪ್ರಕರಣಗಳಿದ್ದು, ರೌಡಿಶೀಟರ್ ಕೂಡ ಆಗಿರುವುದಾಗಿ ತಿಳಿದು ಬಂದಿದೆ.. ಶಕೀಲ್ ಕೂಡ ಪುತ್ತೂರಿನಲ್ಲಿ ನಡೆದ ಹಲವಾರು ಕೋಮುಗಲಭೆ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ ಎನ್ನಲಾಗಿದೆ.

Write A Comment