ರಾಷ್ಟ್ರೀಯ

ಮಗಳ ಸಹಪಾಠಿಯನ್ನೇ ಕೊಂದ ಶಿಕ್ಷಕಿ, ಈಗ ಪೊಲೀಸರ ಅತಿಥಿ

Pinterest LinkedIn Tumblr

Murder

ರಾಂಚಿ: ಆರನೆ ತರಗತಿ ಓದುತ್ತಿದ್ದ ಮಗಳು ಹಮ್ಜಾಳ ಸಹಪಾಠಿ ವಿನಯ್ ಮಹತೋನನ್ನು ಕೊಲೆಮಾಡಿದ್ದು ಬೇರಾರು ಅಲ್ಲ. ಆತನ ಶಿಕ್ಷಕಿ ನಜಿಯಾ ಖತೂನ್ ಎಂದು ಪೊಲೀಸರು ತಿಳಿಸಿದ್ದಾರೆ. ನಜಿಯಾಳನ್ನು ಬಂಧಿಸಲಾಗಿದೆ.

ಶುಕ್ರವಾರ ವಿನಯ್ ಮೃತ ದೇಹ ಶಿಕ್ಷಕರ ವಸತಿಗೃಹದ ಸಮೀಪ ಕಾಣಿಸಿಕೊಂಡಿತ್ತು, ಸಿಸಿಟಿವಿಯಲ್ಲಿ ಸೆರೆಹಿಡಿಯಲಾದ ವಿಡಿಯೋ ತುಣುಕುಗಳನ್ನು ವೀಕ್ಷಿಸಿದಾಗ ಸತ್ಯ ಹೊರ ಬಂದಿದೆ. ಶುಕ್ರವಾರ ರಾತ್ರಿ ವಿನಯ್ ಸ್ನೇಹಿತರನ್ನು ಭೇಟಿಯಾಗಲು ಹಾಸ್ಟೆಲ್​ನ ಮುಖ್ಯದ್ವಾರದಲ್ಲಿ ಹೋಗಿದ್ದು, ಸ್ವಲ್ಪ ಸಮಯದ ನಂತರ ತೀವ್ರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಪ್ರವೇಶದ್ವಾರದ ಬಳಿ ಕಾಣಿಸಿದ್ದ.

ನಜಿಯಾ ಖತೂನ್ ಈ ರೀತಿ ದಾಳಿ ನಡೆಸಿ ಹತ್ಯೆ ಮಾಡಲು ಮಗಳು ಹಮ್ಜಾ ಜತೆಗೆ ವಿನಯ್ ಸ್ನೇಹದಿಂದಿರುವುದೆ ಕಾರಣ. ಆಕೆಗೆ ಈ ಸ್ನೇಹ ಇಷ್ಟವಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Write A Comment