ರಾಷ್ಟ್ರೀಯ

ಅಧಿಕಾರಿಗಳನ್ನು ಹೊತ್ತುಕೊಂಡು ನಡೆದರೆ ಬೊಜ್ಜು ಕರಗುತ್ತಂತೆ!: ಉತ್ತರಾಖಂಡ ಪೊಲೀಸ್ ಇಲಾಖೆಯಲ್ಲಿ ವಿಚಿತ್ರ ಪ್ರಯೋಗ

Pinterest LinkedIn Tumblr

bajjar-webfiಡೆಹ್ರಾಡೂನ್: ಹಿರಿಯ ಅಧಿಕಾರಿಗಳನ್ನು ಹೆಗಲ ಮೇಲೆ ಹೊತ್ತುಕೊಂಡು ನಡೆದರೆ, ಪೊಲೀಸ್ ಪೇದೆಗಳ ಬೊಜ್ಜು ಕರಗುತ್ತದೆಯೇ? ಅಂತರ್ಜಾಲಗಳಲಿ ಹರಿದಾಡುತ್ತಿರುವ ವಿಡಿಯೋವನ್ನು ಗಮನಿಸಿದರೆ ಪೊಲೀಸ್ ಇಲಾಖೆಯಲ್ಲಿ ಇಂತಹ ‘ಪ್ರಯೋಗ’ ನಡೆಯುತ್ತಿರುವುದನ್ನು ನಂಬಬೇಕಾಗುತ್ತದೆ.

ಪೊಲೀಸ್ ಇಲಾಖೆಗೆ ಒಮ್ಮೆ ಸೇರಿದ ನಂತರ ತಮ್ಮ ಮೊದಲಿನ ಫಿಟ್ನೆಸ್ ಕಾಯ್ದುಕೊಳ್ಳಲು ವಿಫಲರಾಗುವ ಜತೆಗೆ ಹೆಚ್ಚುವರಿ ಬೊಜ್ಜು ಬೆಳಸಿಕೊಂಡ ಪೊಲೀಸರಿಗೆ ಉತ್ತರಾಖಂಡದ ಹಿರಿಯ ಪೊಲೀಸ್ ಅಧಿಕಾರಿಗಳು ಬುಧವಾರ ವಿಲಕ್ಷಣ ಫಿಟ್ನೆಸ್ ಟೆಸ್ಟ್ ನಡೆಸಿದ್ದಾರೆ.

ಅಧಿಕ ತೂಕದ ಪೊಲೀಸ್ ಕಾನ್​ಸ್ಟೆಬಲ್​ಗಳು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಬೆನ್ನಮೇಲೆ ಹೊತ್ತು ಗಾರ್ಡನ್ ಸುತ್ತ ತಿರುಗಾಡ ಬೇಕಾಗಿತ್ತು. ಈ ರೀತಿ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಹೊರಿಸಿದ ಅಮಾನವೀಯ ಹಾಗೂ ಹಾಸ್ಯಾಸ್ಪದ ಪ್ರಯೋಗದ ವೀಡಿಯೋ ತುಣುಕುಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ. ಈ ಘಟನೆಯನ್ನು ಖಂಡಿಸಿರುವ ಡಿಜಿಪಿ ಬಿಎಸ್ ಸಿಧು ಈ ಬಗ್ಗೆ ಸೂಕ್ತ ತನಿಖೆ ನಡೆಸುವುದಾಗಿ ಹೇಳಿದ್ದಾರೆ.

Write A Comment