ಹೈದರಾಬಾದ್: ಹೈದರಾಬಾದ್ ವಿವಿಯ ದಲಿತ ಸಂಶೋಧನ ವಿದ್ಯಾರ್ಥಿ ರೋಹಿತ್ ವೇಮುಲ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಪ್ರತಿಭಟನೆ ಇದೀಗ ಇನ್ನಷ್ಟು ತೀವ್ರಗೊಂಡಿದೆ.
ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ವಿವಿಧ ಆಡಳಿತಾತ್ಮಕ ಹುದ್ದೆಗಳನ್ನು ಹೊಂದಿದ್ದ ಎಸ್ ಸಿ/ಎಸ್ ಟಿ ಸಮುದಾಯಕ್ಕೆ ಸೇರಿದ ಸುಮಾರು ಹತ್ತು ಪ್ರೊಫೆಸರುಗಳು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ವೇಮುಲ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮತಿ ಇರಾನಿ ಅವರು “ಸೃಷ್ಟಿ ಸಿರುವ ಹೇಳಿಕೆ’ಯನ್ನು ವಿರೋಧಿಸಿ ಈ ಪ್ರೊಫೆಸರ್‌ಗಳು ರಾಜೀನಾಮೆ ಮೂಲಕ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿದ್ದಾರೆ.
ದಲಿತ ಸಂಶೋದನ ವಿದ್ಯಾರ್ಥಿಯ ಆತ್ಮಹತ್ಯೆಗೆ ಸಂಬಂಧಿಸಿ ಸಚಿವೆ ಸ್ಮತಿ ಇರಾನಿ ನೀಡಿರುವ ಹೇಳಿಕೆಗಳನ್ನು ಸತ್ಯವನ್ನು ತಿರುಚಿದ್ದಾಗಿವೆ ಎಂದು ಗುರುವಾರ ದಲಿತ ಪ್ರೊಫೆಸರ್‌ಗಳು ಹೇಳಿದ್ದಾರೆ.
ಕೇಂದ್ರ ಸಚಿವೆ ಇರಾನಿ ಅವರು “ಸೃಷ್ಟಿಸಿ ನೀಡಿರುವ ಹೇಳಿಕೆಗಳನ್ನು ಪ್ರತಿಭಟಿಸಿ ನಾವು ನಮ್ಮ ಆಡಳತಾತ್ಮಕ ಹುದ್ದೆಗಳಿಗೆ ರಾಜೀನಾಮೆ ನೀಡುತ್ತಿದ್ದೇವೆ’ ಎಂದು ಹತ್ತು ಪ್ರೊಫೆಸರುಗಳು ನೀಡಿರುವ ಹೇಳಿಕೆಯನ್ನು ಎಸ್ ಸಿ / ಎಸ್ ಟಿ ಶಿಕ್ಷಕರ ಸಂಘ ಮತ್ತು ಅಧಿಕಾರಿಗಳ ವೇದಿಕೆಯು ಮಾಧ್ಯಮಗಳಿಗೆ ಬಿಡುಗಡೆ ಮಾಡಿದೆ.
ರೋಹಿತ್ ವೇಮುಲ ಅವರ ಆತ್ಮಹತ್ಯೆಯನ್ನು ಪ್ರತಿಭಟಿಸಿ ವಿದ್ಯಾರ್ಥಿಗಳು ನಡೆಸುತ್ತಿರುವ ಆಂದೋಲನವನ್ನು ನಾವು ಬೆಂಬಲಿಸುತ್ತೇವೆ; ನಮ್ಮ ವಿದ್ಯಾರ್ಥಿಗಳ ವಿರುದ್ಧ ಹೂಡಲಾಗಿರುವ ಪೊಲೀಸ್ ಕೇಸುಗಳನ್ನು ಹಾಗೂ ವಿದ್ಯಾರ್ಥಿಗಳ ಮೇಲಿನ ಅಮಾನತು ಆದೇಶವನ್ನು ತತ್‌ಕ್ಷಣವೇ ಹಿಂಪಡೆಯಬೇಕೆಂದು ನಾವು ಆಗ್ರಹಿಸುತ್ತೇವೆ’ ಎಂದು ಪ್ರೊಫೆಸರ್‌ಗಳು ತಮ್ಮ ಲಿಖೀತ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.
-ಉದಯವಾಣಿ