ಬೆಂಗಳೂರು, ಜ.20- ಕೈಗಾರಿಕಾ ಪ್ರದೇಶಗಳಿಗೆ ಬಸ್ ಸೌಕರ್ಯ ಒದಗಿಸಲಾಗು ವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. ಎಂಎಸ್ಎಂಇ ಆಯೋಜಿಸಿದ್ದ ಇಂಡ್ -ಎಕ್ಸ್ಪೋ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯದ ಯಾವ ಯಾವ ಕೈಗಾರಿಕಾ ಪ್ರದೇಶಗಳಿಗೆ ಬಸ್ಸಿನ ಅವಶ್ಯಕತೆಯಿದೆ ಎಂಬುದರ ಪ್ರಸ್ತಾವನೆಯನ್ನು ನೀಡಬೇಕೆಂದು ಕೈಗಾರಿಕಾ ಸಂಘಟನೆಗಳಿಗೆ ಸಲಹೆ ಮಾಡಿದರು.
ಸದ್ಯದಲ್ಲೇ ಕೈಗಾರಿಕಾ ಪ್ರದೇಶಗಳಿಗೆ ಬಸ್ ಸೌಕರ್ಯ ಒದಗಿಸುವ ಬಗ್ಗೆ ಕೈಗಾರಿಕಾ ಸಂಘಟನೆಗಳ ಪ್ರತಿನಿಧಿಗಳು ಮತ್ತು ಅಧಿಕಾರಿಗಳನ್ನೊಳಗೊಂಡ ಸಭೆ ಕರೆಯಲಾಗುವುದು ಎಂದರು.
ಪ್ರತಿ ತಾಲೂಕಿನಲ್ಲಿ ಕೈಗಾರಿಕಾಭಿವೃದ್ಧಿಯಾ ಗಬೇಕೆಂಬ ಉದ್ದೇಶದಿಂದ ದಿ.ದೇವರಾಜ ಅರಸು ಅವರು ಕೈಗಾರಿಕಾ ಅಭಿವೃದ್ಧಿಗೆ ಒತ್ತು ಕೊಟ್ಟಿದ್ದರು. ಕೈಗಾರಿಕೆಗಳಿಗೆ ಅಗತ್ಯವಿರುವ ರಸ್ತೆ, ನೀರು, ವಿದ್ಯುತ್ ಸೇರಿದಂತೆ ಮೂಲ ಸೌಲಭ್ಯ ಒದಗಿಸಿ ಕೆಲವೊಂದು ತೆರಿಗೆ ವಿನಾಯಿತಿಗಳನ್ನು ನೀಡಬೇಕು. ಬ್ಯಾಂಕ್ಗಳು ಸಹ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಒದಗಿಸಬೇಕು ಎಂದರು. ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ 7 ಲಕ್ಷ ಮಂದಿಗೆ ಉದ್ಯೋಗ ಕಲ್ಪಿಸಲಾಗಿದೆ ಎಂದು ರಾಮಲಿಂಗಾರೆಡ್ಡಿ ಹೇಳಿದರು.