ರಾಷ್ಟ್ರೀಯ

ಮಾಳವೀಯ ಜಯಂತಿಗೆ ಗೌರವ ಸಲ್ಲಿಸಿದ ಮೋದಿ

Pinterest LinkedIn Tumblr

Madan-Mohan-Malviyaನವದೆಹಲಿ: ಸ್ವಾತಂತ್ರ್ಯ ಹೋರಾಟಗಾರ ಮತ್ತು ಶಿಕ್ಷಣ ತಜ್ಞ ಪಂಡಿತ್ ಮದನ್ ಮೋಹನ್ ಮಾಳವೀಯ ಅವರ ಜಯಂತಿಯಾದ ಇಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡುವ ಮೂಲಕ ಗೌರವ ಸಲ್ಲಿಸಿದ್ದಾರೆ.

“ಮಾಳವೀಯ ಅವರ ಜಯಂತಿಯ ದಿನವಾದ ಇಂದು ಅವರು ದೇಶಕ್ಕೆ ನೀಡಿದ ಬಹು ದೊಡ್ಡ ಕೊಡುಗೆಯನ್ನು ನಾವು ನೆನಪಿಸಿಕೊಳ್ಳೋಣ” ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

From the history books…here is a letter written by Mahatma Gandhi to Pandit Madan Mohan Malaviya. pic.twitter.com/z3LpPXKpuV
— Narendra Modi (@narendramodi) ಡಿಸೆಂಬರ್ 25, 2015

ಈ ವರ್ಷದ ಮಾರ್ಚ್ ನಲ್ಲಿ ಮಾಳವೀಯ ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಗೌರವವಾದ ಭಾರತರತ್ನವನ್ನು ಮರಣೋತ್ತರವಾಗಿ ಪ್ರಧಾನ ಮಾಡಲಾಗಿತ್ತು. ಮಹಾತ್ಮ ಗಾಂಧಿ, ಮಾಳವೀಯ ಅವರಿಗೆ ಬರೆದಿದ್ದ ಪತ್ರವನ್ನು ಕೂಡ ಮೋದಿ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

೧೮೬೧ ಡಿಸೆಂಬರ್ ೨೫ ರಂದು ಅಲಹಾಬಾದ್ ನಲ್ಲಿ ಜನಿಸಿದ್ದ ಮಾಳವೀಯ ಸ್ವಾತಂತ್ರ ಹೋರಾಟದಲ್ಲಿ ಪಾಲ್ಗೊಂಡಿದ್ದವರು ಮತ್ತು ಕಾಂಗ್ರೆಸ್ ಪಕ್ಷದ ಅಧ್ಯಕ್ಷರೂ ಕೂಡ ಆಗಿದ್ದವರು. ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಸಂಸ್ಥಾಪಕರೂ ಕೂಡ.

Write A Comment