ಕನ್ನಡ ವಾರ್ತೆಗಳು

ಕುಂದಾಪುರದಲ್ಲಿ ಕ್ರಿಕೇಟ್ ಪ್ರಿಯರಿಗೆ ರಸದೌತಣ; ನ್ಯಾಷನಲ್ ಲೆವೆಲ್ ಪೆಡ್‌ಲೈಟ್ ಕ್ರಿಕೆಟ್ ಪಂದ್ಯಾಟಕ್ಕೆ ಅಭೂತಪೂರ್ವ ಚಾಲನೆ

Pinterest LinkedIn Tumblr

ಕುಂದಾಪುರ: ಚಕ್ರವರ್ತಿ ಕ್ರಿಕೆಟ್ ಕ್ಲಬ್ ಕುಂದಾಪುರ ಇವರ ಆಶ್ರಯದಲ್ಲಿ ನಾಲ್ಕು ದಿನಗಳು ನಡೆಯುತ್ತಿರುವ ಅಂತರಾಷ್ಟ್ರೀಯ ಮಾದರಿಯ ರಾಷ್ಟ್ರಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ ‘ಚಕ್ರವರ್ತಿ ಟ್ರೋಫಿ’ಗೆ ಗುರುವಾರ ಸಂಜೆ ಅದ್ದೂರಿಯ ಚಾಲನೆ ದೊರೆತಿದೆ.

ಕುಂದಾಪುರ ಡಿವೈ‌ಎಸ್ಪಿ ಎಂ. ಮಂಜುನಾಥ ಶೆಟ್ಟಿ ಚಕ್ರವರ್ತಿ ಟ್ರೋಫಿಯನ್ನು ಉದ್ಘಾಟಿಸಿ ಮಾತನಾಡಿ, 16 ನೇ ಶತಮಾನದಲ್ಲಿ ಹುಟ್ಟಿಕೊಂಡ ಕ್ರಿಕೇಟ್ ಆಟವನ್ನು 18ನೇ ಶತಮಾನದಲ್ಲಿ ಇಂಗ್ಲೆಂಡ್ ತನ್ನ ರಾಷ್ಟ್ರೀಯ ಕ್ರೀಡೆಯಾಗಿ ಮಾಡಿಕೊಂಡಿತು. ಬಳಿಕ ಕ್ರಿಕೇಟ್ ಬೆಳೆದು ಬೆಳೆದು ಪ್ರಸಿದ್ಧತೆ ಜಾಸ್ಥಿಯಾಗಿ ಜನರನ್ನು ರಂಜಿಸುತ್ತಿದೆ. ಕ್ರಿಕೇಟ್ ಶಾಂತಿ ಸಾಮರಸ್ಯದ ರಾಯಭಾರಿಯಾಗಬೇಕು. ಈ ನಿಟ್ಟಿನಲ್ಲಿ ಕುಂದಾಪುರದಲ್ಲಿ ಚಕ್ರವರ್ತಿ ಕ್ರಿಕೇಟ್ ಕ್ಲಬ್ ಸದಸ್ಯರಿಂದ ಉತ್ತಮ ಬದಲಾವಣೆ ನಡೆದು ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಹೊಸತನದ ಆಧುನಿಕ ತಂತ್ರಜ್ಞಾನದೊಂದಿಗೆ ಇಷ್ಟು ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸಿರುವುದು ಅಭಿನಂದನಾರ್ಹ ಎಂದರು.

Kndpr_Chakravart Cricket_Innogaration (21) Kndpr_Chakravart Cricket_Innogaration (31) Kndpr_Chakravart Cricket_Innogaration (23) Kndpr_Chakravart Cricket_Innogaration (18) Kndpr_Chakravart Cricket_Innogaration (20) Kndpr_Chakravart Cricket_Innogaration (25) Kndpr_Chakravart Cricket_Innogaration (24) Kndpr_Chakravart Cricket_Innogaration (30) Kndpr_Chakravart Cricket_Innogaration (7) Kndpr_Chakravart Cricket_Innogaration (8) Kndpr_Chakravart Cricket_Innogaration (5) Kndpr_Chakravart Cricket_Innogaration (9) Kndpr_Chakravart Cricket_Innogaration (3) Kndpr_Chakravart Cricket_Innogaration (6) Kndpr_Chakravart Cricket_Innogaration (10) Kndpr_Chakravart Cricket_Innogaration (2) Kndpr_Chakravart Cricket_Innogaration (4) Kndpr_Chakravart Cricket_Innogaration (1) Kndpr_Chakravart Cricket_Innogaration (12) Kndpr_Chakravart Cricket_Innogaration (15) Kndpr_Chakravart Cricket_Innogaration (27) Kndpr_Chakravart Cricket_Innogaration (28) Kndpr_Chakravart Cricket_Innogaration (29) Kndpr_Chakravart Cricket_Innogaration (22) Kndpr_Chakravart Cricket_Innogaration (13) Kndpr_Chakravart Cricket_Innogaration (11) Kndpr_Chakravart Cricket_Innogaration (19) Kndpr_Chakravart Cricket_Innogaration (26) Kndpr_Chakravart Cricket_Innogaration (17) Kndpr_Chakravart Cricket_Innogaration (14) Kndpr_Chakravart Cricket_Innogaration (16)

ಕ್ರಿಕೇಟ್‌ನಲ್ಲಿ ಆಕರ್ಷಣೆ: ಮೈದಾನದಲ್ಲಿ ನೇರಪ್ರಸಾರ ವೀಕ್ಷಿಸಲು ಬೃಹತ್ ಎಲ್‌ಇಡಿ ಡಿಜಿಟಲ್ ವಾಲ್, ಪಂದ್ಯಾಟದಲ್ಲಿ ತೊಡಗಿರುವ ಎರಡು ತಂಡಗಳಿಗೆ ಕೂರಲು ಅನುಕೂಲಕ್ಕೆ ಡಗೌಟ್ಸ್, ಐಪಿ‌ಎಲ್ ಮಾದರಿಯಲ್ಲಿ ಡಿಜೆ ಸಂಗೀತ, ಹೆಲಿಕ್ಯಾಮ್ ಮೂಲಕ ಮೈದಾನದ ಪಕ್ಷಿನೋಟದ ಚಿತ್ರಿಕರಣ, ಬೌಂಡರಿ ಗೆರೆಗಳಿಗೆ ರಂಗುರಂಗಿನ ಕವಚ ಮುಂತಾದ ಹಲವಾರು ವಿನೂತನ ವ್ಯವಸ್ಥೆಯನ್ನು ಈ ಟೂರ್ನಿಯಲ್ಲಿ ಮಾಡಲಾಗಿದೆ.

ಪಂದ್ಯಕೂಟದ ಇನ್ನೊಂದು ವಿಶೇಷ ಆಕರ್ಷಣೆಯಾಗಿ ಡ್ರ್ಯಾಗನ್ ಪ್ರತಿಕೃತಿ ಮಾದರಿಯಲ್ಲಿ ತಂಪು ಪಾನೀಯ ವಾಹನದ ವ್ಯವಸ್ಥೆಯನ್ನು ಮಾಡಲಾಗಿದ್ದು, ಇದು ಕ್ರೀಡಾಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಅಲ್ಲದೇ ಮಹಿಳೆಯರಿಗೆ ಪಂದ್ಯಾವಳಿ ವೀಕ್ಷಣಗೆ ಪ್ರತ್ಯೇಕ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಸಾಧಕರಿಗೆ ಸನ್ಮಾನ: ಉದ್ಗಾಟನಾ ಸಮಾರಂಭದ ವೇದಿಕೆಯಲ್ಲಿ ರೋಟರಿ ಜಿಲ್ಲಾ 3182 ಇದರ 2018-19 ನೇ ಸಾಲಿನ ಗವರ್ನರ್ ಆಗಿ ಆಯ್ಕೆಯಾದ ರೊಟೇರಿಯನ್ ಅಭಿನಂದನ ಶೆಟ್ಟಿ ಹಾಗೂ ಸತತ 83 ಬಾರಿ ರಕ್ತದಾನ ಮಾಡಿದ ಚಕ್ರವರ್ತಿ ಕ್ರಿಕೆಟ್ ಕ್ಲಬ್ ಸದಸ್ಯರಾದ ವಿಜಯ.ಎಸ್ ಪೂಜಾರಿಯವರಿಗೆ ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿ ಪುರಸಭಾ ಅಧ್ಯಕ್ಷೆ ಕಲಾವತಿ, ಉದ್ಯಮಿಗಳಾದ ಎನ್.ಟಿ, ಪೂಜಾರಿ, ರಾಜೇಶ್ ಕಾರಂತ, ಕೃಷ್ಣ ಪೂಜಾರಿ, ಜಗದೀಶ್ ಶೆಟ್ಟಿ ಮುಂಬೈ, ಸುರೇಶ್ ಶೆಟ್ಟಿ ಮರತ್ತೂರು, ಚಕ್ರವರ್ತಿ ಕ್ರಿಕೆಟ್ ಕ್ಲಬ್ ಅಧ್ಯಕ್ಷ ಶ್ರೀಪಾದ ಉಪಾಧ್ಯ, ಶಶಿಧರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಭಾನುವಾರ ರಾತ್ರಿಯವರೆಗೂ ಕ್ರಿಕೇಟ್ ಅಭಿಮಾನಿಗಳಿಗೆ ಕ್ರಿಕೇಟ್ ವೀಕ್ಷಣೆಯ ಭಾಗ್ಯ ಲಭಿಸಲಿದೆ. ಭಾನುವಾರ ರಾತ್ರಿ ಅದ್ಧೂರಿಯಾಗಿ ನಡೆಯುವ ಸಮಾರೋಪದಲ್ಲಿ ಕ್ರಿಕೇಟ್ ಆಟಗಾರರು ಸಿನೆಮಾ ತಾರೆಯರು ಭಾಗವಹಿಸುತ್ತಾರೆ.

ಒಟ್ಟಾರೆ ಅಂತರಾಷ್ಟ್ರೀಯ ಮಟ್ಟದಂತೆ ಕ್ರಿಕೆಟ್ ಪಂದ್ಯಕೂಟದ ವೀಕ್ಷಣೆಗೆ ಅಪಾರ ಸಂಖ್ಯೆಯಲ್ಲಿ ಪ್ರೇಕ್ಷಕರು ಆವರಿಸಿದ್ದು, ಮೊದಲನೆ ದಿನವೇ ಈ ಕಾರ್ಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದ್ದು ಸುಳ್ಳಲ್ಲ..

ಚಿತ್ರ, ವರದಿ- ಯೋಗೀಶ್ ಕುಂಭಾಸಿ

 

Write A Comment